ಕೊಪ್ಪಳ: ನಾಳೆ ಶಿವಶಾಂತವೀರ ಮಹಾಶಿವಯೋಗಿಗಳವರ 23ನೇ ಪುಣ್ಯಸ್ಮರಣೆ
ಕೊಪ್ಪಳ , 11 ಮಾರ್ಚ್ (ಹಿ.ಸ.): ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಖ್ಯಾತವಾದ ಕೊಪ್ಪಳದ ಶ್ರೀ ಗವಿಮಠದ ಧಾರ್ಮಿಕ, ಸಾಂಸ್ಕøತಿಕ ಪರಂಪರೆ ಮತ್ತು ಶ್ರೀಮಠದ ಪೀಠಾಧಿಪತಿಗಳ ಚರಿತ್ರೆ ನಾಡಿನ ಭಕ್ತರಿಗೆ ಅಪ್ಯಾಯಮಾನ. ಅಂತಹ ಪರಂಪರೆಗೆ ಕಳಸಪ್ರಾಯವಾಗಿ ಶ್ರೀಮಠವನ್ನು ಬೆಳಗಿದ ಭಕ್ತರನ್ನು ಉದ್ಧರಿಸಿ
23rd Commemoration of Shiva Shantaveera Mahashiva Yogi


23rd Commemoration of Shiva Shantaveera Mahashiva Yogi


ಕೊಪ್ಪಳ , 11 ಮಾರ್ಚ್ (ಹಿ.ಸ.):

ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಖ್ಯಾತವಾದ ಕೊಪ್ಪಳದ ಶ್ರೀ ಗವಿಮಠದ ಧಾರ್ಮಿಕ, ಸಾಂಸ್ಕøತಿಕ ಪರಂಪರೆ ಮತ್ತು ಶ್ರೀಮಠದ ಪೀಠಾಧಿಪತಿಗಳ ಚರಿತ್ರೆ ನಾಡಿನ ಭಕ್ತರಿಗೆ ಅಪ್ಯಾಯಮಾನ. ಅಂತಹ ಪರಂಪರೆಗೆ ಕಳಸಪ್ರಾಯವಾಗಿ ಶ್ರೀಮಠವನ್ನು ಬೆಳಗಿದ ಭಕ್ತರನ್ನು ಉದ್ಧರಿಸಿ ನಮ್ಮೆಲ್ಲರ ಆರಾಧ್ಯ ದೈವರಾಗಿ ಭಕ್ತರ ಮನೆ, ಮನದಲ್ಲಿ ನೆಲೆಸಿದವರು ಸಂಸ್ಥಾನ ಶ್ರೀ ಗವಿಮಠದ 17ನೇ ಪೀಠಾಧಿಪತಿಗಳಾದ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರು.

ಪೂಜ್ಯರ ಪುಣ್ಯಸ್ಮರಣೆಯ 12 ರಂದು ಬೆಳಿಗ್ಗೆ 6:00 ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಮತ್ತು ದಯಪಾಲಿಸಿದ ಪರಮ ಪುಜಯರೊಂದಿಗೆ ಕೊಪ್ಪಳದ ಹೊರವಲಯದಲ್ಲಿರು ಐತಿಹಾಸಿಕ, ಪೌರಣಿಕ ಪವಿತ್ರ ಸ್ಥಳವಾಗಿರುವ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀ ಗವಿಮಠದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಭಕ್ತಗಣ ಪಾದಯಾತ್ರೆಯಲ್ಲಿ ಭಾಗವಹಿಸುವುದು ಭಕ್ತಿಯ ಅನನ್ಯತೆಯಾಗಿದೆ. ಆದ್ದರಿಂದ ನಾಡಿನ ಸಮಸ್ತ ಭಕ್ತರು ಪರಮ ಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ, ಗುರುನಾಥನ ನೆನೆದು ಪುನೀತರಾಗಲು ಶ್ರೀಮಠ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande