
ವಿಜಯಪುರ, 10 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ
ಇಂಡಿ ಕಾಗ್ಜಿ ನಿಂಬೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಪತ್ರಿಕಾ ಪ್ರಕಟಣೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.
ಸಾಂಪ್ರದಾಯಿಕವಾಗಿ ನಿಂಬೆ ಬೆಳೆಯುತ್ತಿದ್ದ ಇಂಡಿ ಭಾಗದ ಕೃಷಿಕರು ಈಗ ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯವಾಗಿದೆ. ಇದರಿಂದ ಕೃಷಿಕರಿಗೆ ವರ್ಷಪೂರ್ತಿ ಆದಾಯ ಗಳಿಸುವ ಅವಕಾಶವೂ ಸಿಕ್ಕಿದೆ ಎಂದರು.
ಕಾಗ್ಜಿ ನಿಂಬೆಗಳಿಗೆ ಭೌಗೋಳಿಕವಾಗಿ ಮಾನ್ಯತಾ ಟ್ಯಾಗ್ ದೊರೆತ ನಂತರ ಈ ನಿಂಬೆಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ನೆರೆ ರಾಜ್ಯಗಳಲ್ಲಿಯೂ ಇಂಡಿ ನಿಂಬೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಜಾಗತಿಕ ಮಾರುಕಟ್ಟೆಯಲ್ಲಿಯೂ ಇಂಡಿ ತಾಲ್ಲೂಕಿನ ನಿಂಬೆಗಳು ತಮ್ಮ ಪಾರುಪತ್ಯವನ್ನು ಸಾಧಿಸುತ್ತಿವೆ ಎಂದರು.
ಈ ಸಾಧನೆ ಇಂಡಿ ಭಾಗದ ಕೃಷಿಕರ ಪರಿಶ್ರಮ ಮತ್ತು ನಮ್ಮ ನಾಡಿನ ಕೃಷಿ ಸಂಪತ್ತಿಗೆ ದೊರೆತ ಗೌರವದ ಸಂಕೇತವಾಗಿದೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande