ಆನೆಗೊಂದಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ
ಆನೆಗುಂದಿ, 10 ಮಾರ್ಚ್ (ಹಿ.ಸ.) ಆ್ಯಂಕರ್: ಶ್ರೀವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನಾ ಮಹೋತ್ಸವದ ನಿಮಿತ್ತ ಬಳ್ಳಾರಿ ಶ್ರೀವ್ಯಾಸರಾಜ ಭಜನಾಮಂಡಲಿ ಯ ಸುಮಾರು 70 ಸದಸ್ಯರ ತಂಡದಿಂದ ಆನೆಗುಂದಿ ನವವೃಂದಾವನದಲ್ಲಿ ಮಧ್ಯಾರಾಧನೆಯಂದು ಶ್ರೀವ್ಯಾಸನಮನ ಎಂಬ ಎರಡು ತಾಸಿನ ನೃತ್ಯರೂಪಕ ಜರುಗಿತು
ಆನೆಗೊಂದಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ


ಆನೆಗೊಂದಿಯಲ್ಲಿ ಶ್ರೀ ವ್ಯಾಸರಾಜರ ಆರಾಧನೆ


ಆನೆಗುಂದಿ, 10 ಮಾರ್ಚ್ (ಹಿ.ಸ.)

ಆ್ಯಂಕರ್:

ಶ್ರೀವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನಾ ಮಹೋತ್ಸವದ ನಿಮಿತ್ತ ಬಳ್ಳಾರಿ ಶ್ರೀವ್ಯಾಸರಾಜ ಭಜನಾಮಂಡಲಿ ಯ ಸುಮಾರು 70 ಸದಸ್ಯರ ತಂಡದಿಂದ ಆನೆಗುಂದಿ ನವವೃಂದಾವನದಲ್ಲಿ ಮಧ್ಯಾರಾಧನೆಯಂದು ಶ್ರೀವ್ಯಾಸನಮನ ಎಂಬ ಎರಡು ತಾಸಿನ ನೃತ್ಯರೂಪಕ ಜರುಗಿತು.

ಶ್ರೀಮತಿ ವಿಜಯಲಕ್ಷ್ಮಿ ಸತ್ಯನಾರಾಯಣರಾವ್ ಇವರ ನೇತೃತ್ವದಲ್ಲಿ ವೈಭವೋಪೂರಿತವಾಗಿ ನೆರವೇರಿಸಿಕೊಟ್ಟರು. ಬಳ್ಳಾರಿ ಶ್ರೀ ವ್ಯಾಸರಾಜ ಮಠದಲ್ಲಿ ಆರಾಧನೆಯ ಪ್ರಯುಕ್ತ ಅಷ್ಟೋತ್ತರ ಪಂಚಾಮೃತಾಭಿಷೇಕ, ಅಲಂಕಾರ ಬ್ರಾಹ್ಮಣ ಭೋಜನಾದಿಗಳು ಸಂಜೆ ಶ್ರೀ ಸಮೀರಾಚಾರ್ ಅವರ ದಾಸವಾಣಿ ಕಾರ್ಯಕ್ರಮ ಪಂಚಾಂಗ ಬಿಡುಗಡೆ ಸ್ವಸ್ತಿವಾಚನ ಮುಂತಾದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವೋಪೇತವಾಗಿ ಜರುಗಿದವು.

ಅಲ್ಲದೇ ದ ವರ್ಲ್ಡ್ ಫೋರಂ ಆಫ್ ವ್ಯಾಸರಾಜ ಮುನಿತ್ರಯ ಯುಟ್ಯೂಬ್ ಮೂಲಕ ವ್ಯಾಸರಾಜ ಭಜನಾ ಮಂಡಳಿ ಅವರು ನೃತ್ಯ ಹಾಗೂ ಭಜನಾ ಕಾರ್ಯಕ್ರಮ ವನ್ನು ಶ್ರೀ ವ್ಯಾಸರಾಜರ ಉತ್ತರಾಧನೆ ಪ್ರಯುಕ್ತ ಪ್ರಸ್ತುತ ಪಡಿಸಲಾಗಿದೆ.

ಶ್ರೀ ವ್ಯಾಸರಾಜರ 487ನೇ ಆರಾಧನಾ ಮಹೋತ್ಸವದ ಅಂಗವಾಗಿ ದ ವರ್ಲ್ಡ್ ಫಾರ್ಮ ಆಫ್ ವ್ಯಾಸರಾಜ ಡಿವೋಟೀಸ್ ಮುನಿತ್ರಯ ಯೂಟೂಬ್ ಯು ಎಸ್ ಎ ಇವರ ಅಪೇಕ್ಷೆಯಂತೆ ಬಳ್ಳಾರಿ ಶ್ರೀ ವ್ಯಾಸರಾಜ ಭಜನಾ ಮಂಡಲಿ ವತಿಯಿಂದ ವಿಜಯಲಕ್ಷ್ಮಿ ಸತ್ಯನಾರಾಯಣರಾವ್ ಇವರ ನೇತೃತ್ವದಲ್ಲಿ ನೃತ್ಯಸೇವೆ ಮತ್ತು ಭಜನಾ ಸೇವೆಯನ್ನು ಸಲ್ಲಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande