
ಬಾಗಲಕೋಟೆ, 10 ಮಾರ್ಚ್ (ಹಿ.ಸ.)
ಆ್ಯಂಕರ್ : ಸಮಾಜದ ಅಂಧಕಾರವನ್ನು ದೂರ ಮಾಡಿ ಶಿಕ್ಷಣದ ದೀಪ ಬೆಳಗಿದ ಮಹಾನ್ ಸಮಾಜ ಸುಧಾರಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಪುಣ್ಯಸ್ಮರಣೆಯಂದು ಬಾಗಲಕೋಟೆ ಜಿಲ್ಲೆಯ ಮುಧೋಳ್ ಶಾಸಕ ಆರ್ ಬಿ ತಿಮ್ಮಾಪುರ ಗೌರವಪೂರ್ವಕ ನಮನಗಳು ಸಲ್ಲಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರು ತೋರಿದ ಧೈರ್ಯ, ತ್ಯಾಗ ಮತ್ತು ದೃಢಸಂಕಲ್ಪವು ಭಾರತೀಯ ಸಮಾಜಕ್ಕೆ ಹೊಸ ದಿಕ್ಕನ್ನು ನೀಡಿದೆ. ಅವರ ಚಿಂತನೆಗಳು ಮತ್ತು ಶಿಕ್ಷಣದ ಮಹತ್ವದ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande