ಒಕ್ಕಲುತನ ಹುಟ್ಟುವಳಿ-ಮಾರಾಟ ಸಹಕಾರ ಸಂಘದ ನೂತನ ಸದಸ್ಯರಿಂದ ಮಾಜಿ ಶಾಸಕರಿಗೆ ಸನ್ಮಾನ
ಬಾಗಲಕೋಟೆ, 10 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಜಮಖಂಡಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನವಾಗಿ ಆಯ್ಕೆಯಾದ ಸದಸ್ಯರು ಇಂದು ಜಮಖಂಡಿಯ ಜನಪ್ರಿಯ ನಾಯಕರಾದ ಆನಂದ ನ್ಯಾಮಗೌಡ ಅ
ಒಕ್ಕಲುತನ ಹುಟ್ಟುವಳಿ-ಮಾರಾಟ ಸಹಕಾರ ಸಂಘದ ನೂತನ ಸದಸ್ಯರಿಂದ ಮಾಜಿ ಶಾಸಕರಿಗೆ ಸನ್ಮಾನ


ಬಾಗಲಕೋಟೆ, 10 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಜಮಖಂಡಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನವಾಗಿ ಆಯ್ಕೆಯಾದ ಸದಸ್ಯರು ಇಂದು ಜಮಖಂಡಿಯ ಜನಪ್ರಿಯ ನಾಯಕರಾದ ಆನಂದ ನ್ಯಾಮಗೌಡ ಅವರಿಗೆ ಸನ್ಮಾನಿಸಿದರು.

ಅವರ ಗೃಹ ಕಚೇರಿಗೆ ಭೇಟಿ ನೀಡಿದ ನೂತನವಾಗಿ ಆಯ್ಕೆಯಾದ ಸದಸ್ಯರು ನಾಮಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ ನ್ಯಾಮಗೌಡ, ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ, ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಬಳಿಕ ಅವರು ನೂತನ ಸದಸ್ಯರನ್ನೂ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande