ಬಳ್ಳಾರಿ: ಕುಡಿಯುವ ನೀರು ನಿಯಂತ್ರಣ ಕೇಂದ್ರ ಆರಂಭ
ಬಳ್ಳಾರಿ, 10 ಮಾರ್ಚ್ (ಹಿ.ಸ.) ಆ್ಯಂಕರ್: ಜಿಲ್ಲೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಇತರೆ ನಾಗರಿಕ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ‘ಕಂಟ್ರೋಲ್ ರೂಂ'' ತೆರೆಯಲಾಗಿದೆ. ಜಿಲ್ಲಾಡಳಿತವು ಸಾರ್ವಜನಿಕರ ದೂರುಗಳನ್ನು ಸ
ಬಳ್ಳಾರಿ: ಕುಡಿಯುವ ನೀರು ‘ಕಂಟ್ರೋಲ್ ರೂಂ' ಆರಂಭ


ಬಳ್ಳಾರಿ, 10 ಮಾರ್ಚ್ (ಹಿ.ಸ.)

ಆ್ಯಂಕರ್: ಜಿಲ್ಲೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಇತರೆ ನಾಗರಿಕ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ‘ಕಂಟ್ರೋಲ್ ರೂಂ' ತೆರೆಯಲಾಗಿದೆ.

ಜಿಲ್ಲಾಡಳಿತವು ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ, ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಕ್ಷಣವೇ ರವಾನಿಸಿ ಶೀಘ್ರ ಪರಿಹಾರ ಒದಗಿಸಲಿದೆ.

ಸಂಪರ್ಕಿಸಬೇಕಾದ ಸಂಖ್ಯೆಗಳು:

ದೂರವಾಣಿ ಸಂಖ್ಯೆ (ಟೋಲ್ ಫ್ರೀ ಸಂಖ್ಯೆ)-1077

ಲ್ಯಾಂಡ್ ಲೈನ್ ಸಂಖ್ಯೆ-08392-277100

ವಾಟ್ಸಾಪ್ ಸಂಖ್ಯೆ-8277888866

ಜಿಲ್ಲೆಯ ನಾಗರಿಕರು ತಮ್ಮ ಭಾಗದ ಕುಡಿಯುವ ನೀರಿನ ಸಮಸ್ಯೆ ಅಥವಾ ಇತರೆ ಯಾವುದೇ ಸಾರ್ವಜನಿಕ ದೂರುಗಳಿದ್ದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ದೂರು-ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande