ಅಳ್ನಾವರ–ದಾಂಡೇಲಿ ಡೆಮು ರೈಲು ವೇಳಾಪಟ್ಟಿ ಬದಲಾವಣೆ
ಹುಬ್ಬಳ್ಳಿ, 10 ಮಾರ್ಚ್ (ಹಿ.ಸ.): ಆ್ಯಂಕರ್: ಅಳ್ನಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರದ ದಿನ ಹಾಗೂ ವೇಳಾಪಟ್ಟಿಯಲ್ಲಿ ನೈರುತ್ಯ ರೈಲ್ವೆಯು ಬದಲಾವಣೆ ಮಾಡಿದೆ. ಈ ನೂತನ ಬದಲಾವಣೆಗಳು ಮಾರ್ಚ್ 17, 2026 ರಿಂದ ಜಾರಿಗೆ ಬರಲಿವೆ. ಈ ಹಿಂದೆ ವಾರದಲ್ಲಿ ಆರು ದಿನ (ಭಾನುವಾರ ಹೊರ
ಅಳ್ನಾವರ–ದಾಂಡೇಲಿ ಡೆಮು ರೈಲು ವೇಳಾಪಟ್ಟಿ ಬದಲಾವಣೆ


ಹುಬ್ಬಳ್ಳಿ, 10 ಮಾರ್ಚ್ (ಹಿ.ಸ.):

ಆ್ಯಂಕರ್:

ಅಳ್ನಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರದ ದಿನ ಹಾಗೂ ವೇಳಾಪಟ್ಟಿಯಲ್ಲಿ ನೈರುತ್ಯ ರೈಲ್ವೆಯು ಬದಲಾವಣೆ ಮಾಡಿದೆ.

ಈ ನೂತನ ಬದಲಾವಣೆಗಳು ಮಾರ್ಚ್ 17, 2026 ರಿಂದ ಜಾರಿಗೆ ಬರಲಿವೆ. ಈ ಹಿಂದೆ ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಈ ರೈಲುಗಳು, ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ ಆರು ದಿನಗಳ ಕಾಲ ಸಂಚರಿಸಲಿವೆ. ಅಂದರೆ, ಇನ್ನು ಮುಂದೆ ಭಾನುವಾರವೂ ರೈಲು ಸೇವೆ ಲಭ್ಯವಿದ್ದು, ಗುರುವಾರ ರೈಲುಗಳ ಸಂಚಾರ ಇರುವುದಿಲ್ಲ‌ ಎಂದು ಪ್ರಕಟಣೆ ತಿಳಿಸಿದೆ.

ಅಳ್ನಾವರ–ದಾಂಡೇಲಿ ರೈಲುಗಳ ಪರಿಷ್ಕೃತ ವೇಳಾಪಟ್ಟಿ ವಿವರ:

ರೈಲು ಸಂಖ್ಯೆ 76501 ಅಳ್ನಾವರ-ದಾಂಡೇಲಿ ಡೆಮು ಅಳ್ನಾವರದಿಂದ ಬೆಳಿಗ್ಗೆ 05:30ರ ಬದಲಾಗಿ 05:00 ಗಂಟೆಗೆ ಹೊರಟು, ಬೆಳಿಗ್ಗೆ 06:15ರ ಬದಲು 05:45ಕ್ಕೆ ದಾಂಡೇಲಿ ತಲುಪಲಿದೆ. ಮರಳಿ ಬರುವಾಗ, ರೈಲು ಸಂಖ್ಯೆ 76502 ದಾಂಡೇಲಿ-ಅಳ್ನಾವರ ಡೆಮು ದಾಂಡೇಲಿಯಿಂದ ಬೆಳಿಗ್ಗೆ 06:45ರ ಬದಲು 06:15ಕ್ಕೆ ಹೊರಟು, ಬೆಳಿಗ್ಗೆ 07:30ರ ಬದಲು 07:00ಕ್ಕೆ ಅಳ್ನಾವರ ತಲುಪಲಿದೆ.

ಅದೇ ರೀತಿ, ರೈಲು ಸಂಖ್ಯೆ 76503 ಅಳ್ನಾವರ-ದಾಂಡೇಲಿ ಡೆಮು ಬೆಳಿಗ್ಗೆ 07:40ರ ಬದಲು 07:35ಕ್ಕೆ ಅಳ್ನಾವರದಿಂದ ಹೊರಟು, ಬೆಳಿಗ್ಗೆ 08:25ರ ಬದಲು 08:20ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಆದಾಗ್ಯೂ, ರೈಲು ಸಂಖ್ಯೆ 76504 ದಾಂಡೇಲಿ-ಅಳ್ನಾವರ ಡೆಮುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ, ಇದು ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 08:40ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 09:25ಕ್ಕೆ ಅಳ್ನಾವರ ತಲುಪಲಿದೆ.

ಇದಲ್ಲದೆ, ರೈಲು ಸಂಖ್ಯೆ 76505 ಅಳ್ನಾವರ-ದಾಂಡೇಲಿ ಡೆಮು ಈಗಿರುವ ಸಂಜೆ 07:30ರ ಬದಲು 06:00 ಕ್ಕೆ ಅಳ್ನಾವರದಿಂದ ಹೊರಟು, ರಾತ್ರಿ 08:15ರ ಬದಲು ಸಂಜೆ 06:45ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 76506 ದಾಂಡೇಲಿ-ಅಳ್ನಾವರ ಡೆಮು ರಾತ್ರಿ 08:30ರ ಬದಲು ಸಂಜೆ 07:05ಕ್ಕೆ ದಾಂಡೇಲಿಯಿಂದ ಹೊರಟು, 09:15ರ ಬದಲು ಸಂಜೆ 07:50 ಕ್ಕೆ ಅಳ್ನಾವರ ತಲುಪಲಿದೆ.

ಪ್ರಯಾಣಿಕರು ಪರಿಷ್ಕೃತ ಸೇವಾ ದಿನಗಳು ಮತ್ತು ಸಮಯವನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ರೇಲ್ವೆ ಇಲಾಖೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande