
ವಿಜಯಪುರ, 10 ಮಾರ್ಚ್ (ಹಿ.ಸ.)
ಆ್ಯಂಕರ್ :
ದೇಶದ ಅಮೂಲ್ಯ ಸಂಪತ್ತು, ವಿಮಾನ ನಿಲ್ದಾಣಗಳು, ಕೈಗಾರಿಕೆಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹಗಲು-ರಾತ್ರಿ ಕಾವಲು ಕಾಯುವ ಸಿಐಎಸ್ಎಫ್ ಯೋಧರ ದಿನಾಚರಣೆಯನ್ನು ವಿಜಯಪುರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ತನು ಪೌಂಡೇಷನ್ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ಸಿಐಎಸ್ಎಫ್ ಯೋಧರ ದಿನಾಚರಣೆ ಆಯೋಜಿಸಲಾಗಿದ್ದು, ಪೌಂಡೇಷನ್ ಸದಸ್ಯರು ಭಾಗವಹಿಸಿ ಯೋಧರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ “ನಿಮ್ಮ ಧೈರ್ಯದಲ್ಲಿ ನಮ್ಮ ಭದ್ರತೆ, ನಿಮ್ಮ ತ್ಯಾಗದಲ್ಲಿ ನಮ್ಮ ನಾಳೆಯ ಭರವಸೆ” ಎಂಬ ಘೋಷಣೆಯನ್ನು ಹಾಕಿ ದೇಶಪ್ರೇಮದ ಸಂದೇಶ ಸಾರಿದರು. ದೇಶದ ಸುರಕ್ಷತೆಗೆ ತಮ್ಮ ಜೀವವನ್ನು ಪಣಕ್ಕಿಟ್ಟು ನಿಶ್ಶಬ್ದವಾಗಿ ಕರ್ತವ್ಯ ನಿರ್ವಹಿಸುವ ಸಿಐಎಸ್ಎಫ್ ಯೋಧರ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು ದೇಶದ ಪ್ರಮುಖ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಕೈಗಾರಿಕಾ ಘಟಕಗಳ ಭದ್ರತೆಯನ್ನು ಕಾಪಾಡುವಲ್ಲಿ ಸಿಐಎಸ್ಎಫ್ ಯೋಧರು ಸಲ್ಲಿಸುತ್ತಿರುವ ಸೇವೆ ಅಮೂಲ್ಯವೆಂದು ಪ್ರಶಂಸಿಸಿದರು. ಇದೇ ವೇಳೆ ಎಲ್ಲಾ ಸಿಐಎಸ್ಎಫ್ ಯೋಧರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಅರ್ಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande