ಸಿರುಗುಪ್ಪ ನಗರಸಭೆ: ಅರ್ಜಿ ಆಹ್ವಾನ
ಸಿರುಗುಪ್ಪ, 10 ಮಾರ್ಚ್ (ಹಿ.ಸ.) ಆ್ಯಂಕರ್: ಸಿರುಗುಪ್ಪ ನಗರಸಭೆ ವತಿಯಿಂದ 2021-22ನೇ ಸಾಲಿನ ನಗರೋತ್ಥಾನ ಹಂತ-4 ರ ಯೋಜನೆಯಡಿ ಶೇ.05 ರ ಅನುದಾನದಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ವ್ಯಾಪಾರ ನಡೆಸುವುದಕ್ಕಾಗಿ ರೆಡಿಮೆಡ್ ಟಿನ್ಶೆಡ್ ವಾಣಿಜ್ಯ ಮಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅರ್ಹರಿಂದ ಅ
ಸಿರುಗುಪ್ಪ ನಗರಸಭೆ: ಅರ್ಜಿ ಆಹ್ವಾನ


ಸಿರುಗುಪ್ಪ, 10 ಮಾರ್ಚ್ (ಹಿ.ಸ.)

ಆ್ಯಂಕರ್: ಸಿರುಗುಪ್ಪ ನಗರಸಭೆ ವತಿಯಿಂದ 2021-22ನೇ ಸಾಲಿನ ನಗರೋತ್ಥಾನ ಹಂತ-4 ರ ಯೋಜನೆಯಡಿ ಶೇ.05 ರ ಅನುದಾನದಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ವ್ಯಾಪಾರ ನಡೆಸುವುದಕ್ಕಾಗಿ ರೆಡಿಮೆಡ್ ಟಿನ್ಶೆಡ್ ವಾಣಿಜ್ಯ ಮಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 19 ಜನ ವಿಶೇಷಚೇತನರಿದ್ದು, ಅವರ ಜೀವನೋಪಾಯಕ್ಕಾಗಿ ಸ್ವಯಂ ವ್ಯಾಪಾರ ಮಾಡಿಕೊಳ್ಳಲು ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅರ್ಹರು ಮಾ.16 ರೊಳಗಾಗಿ ಅರ್ಜಿ ಸಿರುಗುಪ್ಪ ನಗರಸಭೆ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾದ ದಾಖಲೆ:

ಇತ್ತೀಚಿನ 2-ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲ್ತಿ ವರ್ಷದ ಆಸ್ತಿ ತೆರಿಗೆ ಪ್ರತಿ, ಚಾಲ್ತಿ ವರ್ಷದ ನಮೂನೆ-3 ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ಅಂಗವಿಕಲತೆಯ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande