ಮಾ ೧೨ ರಿಂದ ಕೋಲಾರದಲ್ಲಿ ಅಖಿಲ ಭಾರತ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್
ಮಾ ೧೨ ರಿಂದ ಕೋಲಾರದಲ್ಲಿ ಅಖಿಲ ಭಾರತ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್
ಮಾ ೧೨ ರಿಂದ ಕೋಲಾರದಲ್ಲಿ ಅಖಿಲ ಭಾರತ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್


ಕೋಲಾರ ಮಾ.೧೦ (ಹಿ.ಸ)

ಆಂಕರ್ : ನಗರದ ಚಿನ್ನದ ನಾಡು ಬ್ಯಾಸ್ಕೆಟ್ ಬಾಲ್ ಕ್ಲಬ್ ಪ್ರಯೋಜಕತೆಯಲ್ಲಿ ಮಾ,೧೨ ರಿಂದ ಮಾ ೧೫ ರವರೆಗೆ ನಾಲ್ಕು ದಿನಗಳ ಕಾಲ ಕ್ರೀಡಾ ಇಲಾಖೆಯ ಒಳ ಮಿನಿ ಕ್ರೀಡಾಂಗಣದ ಹಿಂಭಾಗದಲ್ಲಿನ ಬ್ಯಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಆಲ್ ಇಂಡಿಯಾ ಇಂಟರ್ ಕಾಲೇಜಿಯೆಟ್ ಯೂನಿವರ್ಸಿಟಿ ಇನ್ವಿಟೇಷನಲ್ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್ ಚಿನ್ನದ ನಾಡು ಕಪ್-೨೦೨೬ ಆಯೋಜಿಸಲಾಗಿದೆ.

ಭಾರತದಾದ್ಯಂತದ ಬಲಿಷ್ಠ ಕಾಲೇಜು ತಂಡಗಳು ಭಾಗವಹಿಸುವ ಬ್ಯಾಸ್ಕೆಟ್ ಬಾಲ್ ತಂಡಗಳು ಭಾಗವಹಿಸಲು ನೋಂದಣಿಯನ್ನು ಮಾಡಿಕೊಂಡಿದೆ. ಈ ಪೈಕಿ ೬ ಬಾಲಕ ತಂಡ ಮತ್ತು ೪ ಮಹಿಳಾ ತಂಡಗಳು ಭಾಗವಹಿಸಲಿದೆ.

ಲೀಗ್ ಕಂ ನಾಕೌಟ್ ಮ್ಯಾಚ್ ಗಳಾಗಿದೆ. ಭಾರತದ ಭವಿಷ್ಯದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುಗಳನ್ನು ವೀಕ್ಷಿಸಿ ಬೆಂಬಲಿಸುವ ಅವಕಾಶವನ್ನು ಸಾರ್ವಜನಿಕರಿಗೆ ದೊರಕಿಸಿಕೊಟ್ಟಿದ್ದಾರೆ. ಗುರುವಾರ ಸಂಜೆ ೬ ಗಂಟೆಗೆ ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.

ಚಿನ್ನದ ನಾಡಿನ ಚಿಣ್ಣರು ಪ್ರಥಮವಾಗಿ ಬ್ಯಾಸ್ಕೆಟ್ ಬಾಲ್ ಕ್ಲಬ್ ರಚಿಸಿಕೊಂಡು ರಾಜ್ಯದ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಅವರನ್ನು ಕ್ಲಬ್ನ ಗೌರವಾಧ್ಯಕ್ಷರನ್ನಾಗಿಸಿ ಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದಾರೆ.

ಕಳೆದ ವರ್ಷ ಮೈಸೂರಿನ ದಸರಾದಲ್ಲಿ ೩ನೇ ಸ್ಥಾನ, ಕರ್ನಾಟಕ ರೂರಲ್ ಲೀಗ್ ಕೆ.ಪಿ.ಎಲ್ ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಈಗ ಅಖಿಲ ಭಾರತ ಮಟ್ಟದಲ್ಲಿ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬ ಗಾದೆಯ ಮಾತಿದೆ. ನಗರದ ಸಾರ್ವಜನಿಕರು ಈ ಮೂರು ದಿನಗಳ ಕಾರ್ಯಕ್ರಮಕ್ಕೆ ಅಗಮಿಸಿ ಯಶಸ್ವಿಗೊಳಿಸ ಬೇಕೆಂದು ಕ್ಲಬ್ನ ಅಧ್ಯಕ್ಷ ಕೆ.ಆರ್ ಮಧು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande