
ಕೋಲಾರ, ೦೧ ಮಾರ್ಚ್ (ಹಿ.ಸ):
ಆಂಕರ್ : ವೀರಶೈವ ಲಿಂಗಾಯತ ಸಮುದಾಯ ಭವನಕ್ಕೆ ಜಾಗ ಕೊಡಿಸಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಕೂಡಾ ಸಭೆಯಲ್ಲಿ ವಿಷಯ ಚರ್ಚಿಸಲಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಅತಿ ಶೀಘ್ರದಲ್ಲೆ ಸಮುದಾಯ ಭವನಕ್ಕೆ ಜಾಗವನ್ನು ನೀಡಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.
ನಗರದ ಟಿ ಚನ್ನಯ್ಯ ರಂಗಮಂದಿರಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ವೀರಶೈವ ಸಮುದಾಯ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಠಗಳ ಸ್ವಾಮೀಜಿಗಳ ಆಶೀರ್ವಾದ ಎಲ್ಲರ ಮೇಲಿದ್ದು, ಮಕ್ಕಳಿಗೆ ಒಳ್ಳೆಯ ವಿಧ್ಯಾಬ್ಯಾಸದ ನಂತರ ಒಳ್ಳೆಯ ಕೆಲಸ ಸಿಗಬೇಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಗುರುಗಳ ಆಶೀರ್ವಾದ ಅವರ ಮಾರ್ಗದರ್ಶನದೊಂದಿಗೆ ಸಿದ್ದಾಂತಗಳನ್ನು ಅನುಸರಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ಮಠದಲ್ಲಿ ಗುರುಗಳು ಇರುವುದರಿಂದಲೇ ಸಂಸ್ಕೃತಿ ಸಿದ್ದಾಂತ ಪದ್ದತಿಗಳು ಉಳಿದುಕೊಂಡಿವೆ, ವರ್ಷಕ್ಕೊಮ್ಮೆ ನಡೆಯುವ ಮಹನೀಯರ ಜಯಂತಿಗೆ ಆಗಮಿಸಿ ಯಶಶ್ವಿಗೊಳಿಸುವ ಮೂಲಕ ಮಹನೀಯರ ಇತಿಹಾಸವನ್ನು ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ ಮುಂದೆ ವೀರಶೈವ ಲಿಂಗಾಯಿತ ಸಮುದಾಯ ಭವನದ ಸ್ಥಳದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಬೆಳ್ಳಾವಿ ಸಂಸ್ಥಾನ ಮಠದ ಶ್ರೀ ಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ. ರಾಜ್ಯದಲ್ಲಿ ಬಹುಸಂಖ್ಯಾತರು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿದ್ದರು ರೇಣುಕಾಚಾರ್ಯ ಹಾಗೂ ಬಸವಣ್ಣ ಜಯಂತಿಗಳನ್ನು ಅದ್ದೂರಿ ಆಚರಣೆ ಮಾಡುವುದು ವಾಡಿಕೆ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಮುದಾಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಂತಸ ಮೂಡಿಸಿದೆ ಎಂದರು.
ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿ ಮಾತನಾಡಿ ಭಾರತ ದೇಶ ಪುಣ್ಯ ಭೂಮಿ ಇಲ್ಲಿ ಸಾವಿರಾರು ಸಂತರು ಮಹಂತರು ಜನ್ಮ ತಾಳಿದ ಭೂಮಿ ನಮ್ಮ ದೇಶ ಅಧರ್ಮ ಹಟ್ಟಹಾಸ ಇದ್ದಾಗ ಒಬ್ಬೊಬ್ಬ ಪುಣ್ಯತ್ಮ ಪುರುಷರು ಹುಟ್ಟಿ ಶಾಂತಿ ನೆಮ್ಮದಿಯನ್ನು ತಂದುಕೊಟ್ಟಿದ್ದಾರೆ ಮಾನವನನ್ನು ದೇವನನ್ನಾಗಿ ಮಾಡಿದ್ದು ರೇಣುಕಾ ಚಾರ್ಯರು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಧರ್ಮ ಜಾತಿ ಎನ್ನದೆ ಪ್ರತಿಯೊಬ್ಬರಿಗೂ ಸಂಸ್ಕೃತಿ ಧರ್ಮದ ಜಾಗೃತಿ ಹಾಗೂ ಸಮಾಜದ ಎಳಿಗೆಗೆಯ ಬಗ್ಗೆ ವಿಚಾರಗಳನ್ನು ತಿಳಿಸುವ ಕೆಲಸವನ್ನು ರೇಣುಕಾಚಾರ್ಯರು ಮಾಡಿದ್ದಾರೆ ಎಂದು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಎ.ಆರ್ ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು ಅಪರ ಜಿಲ್ಲಾಧಿಕಾರಿ ಮಂಗಳ, ಸಮುದಾಯ ಮುಖಂಡರು ಮಾತನಾಡಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್ ವಿಜಯಲಕ್ಷ್ಮಿ ಸ್ವಾಗತಿಸಿದರು ಮಾಲೂರು ಗಾಯಿತ್ರಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಸುರೇಶ್, ಸಮುದಾಯ ಮುಖಂಡರಾದ ಸಿದ್ದಲಿಂಗ ಒಡೆಯರ್, ರಾಮಸಂದ್ರ ಕುಮಾರ್, ವೀರೇಂದ್ರ ಪಾಟೀಲ್, ಬಿಆರ್ ಎಂ ಚನ್ನಪ್ಪ, ಶರಣೆಯರ ಬಳಗದ ಜಿಲ್ಲಾಧ್ಯಕ್ಷೆ ಉಷಾ ಗಂಗಾಧರ್ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್