
ಗದಗ, 01 ಮಾರ್ಚ್ (ಹಿ.ಸ.):
ಆ್ಯಂಕರ್:
ಕಳೆದ 23 ವರ್ಷಗಳಿಂದ ಶಿಲ್ಪಕಲೆಗಳಲ್ಲಿ ಮಾಡಿದ ಸಾಧನೆಗೆ ಏಷ್ಯಾ ಇಂಟರ್'ನ್ಯಾಷನಲ್ ಕಲ್ಚರ್ ರಿಸಚ್೯ ವಿಶ್ವವಿದ್ಯಾಲಯವು ಸುಮಲತಾ ಕವಲೂರ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
ಕಳೆದ 23 ವರ್ಷಗಳಿಂದ ಸಾಂಪ್ರದಾಯಿಕ ಶಿಲ್ಪಿ ಮಾಧ್ಯಮ - ಕಲ್ಲು, ಮರ, ಮಣ್ಣು, ಶಿಲ್ಪಕಲೆಗಳಲ್ಲಿ ಅಪಾರ ಸಾಧನೆ ಮಾಡಿರುವ ಸುಮಲತಾ ವಿ. ಕವಲೂರು(ಶಿಲ್ಪಿ) ಅವರಿಗೆ ನೂರಾರು ಪ್ರಶಸ್ತಿಗಳು ದೊರೆತಿದ್ದು ಅವರಿಗೆ ಏಷ್ಯಾ ಇಂಟರ್'ನ್ಯಾಷನಲ್ ಕಲ್ಚರ್ ರಿಸಚ್೯ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುಮಲತಾ ಕವಲೂರ ಅವರು ಶಿಲ್ಪಕಲೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ
ಸಾಂಪ್ರದಾಯಕ ಶಿಲ್ಪಕಲೆಯಲ್ಲಿ ಖ್ಯಾತರಾದ ಲಕ್ಕುಂಡಿ ಗ್ರಾಮದ ವೀರಭದ್ರಪ್ಪ ಕವಲೂರ, ಗಂಗೂಬಾಯಿ ವಿ ಕವಲೂರು ದಂಪತಿಗಳ ಪುತ್ರಿಯಾದ ಸುಮಲತಾ ಅವರು
ರಾಜ್ಯ ಮಟ್ಟದ ಶಿಬಿರಗಳು, ದಕ್ಷಿಣ ವಲಯ ಶಿಬಿರ ನಾಗಪುರ, ರಾಷ್ಟ್ರೀಯ ಮಟ್ಟದ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರಲ್ಲದೆ. ಶಿಲ್ಪರತ್ನ ಪ್ರಶಸ್ತಿ, ವಿಶ್ವಕರ್ಮ ಶಿಲ್ಪಿ ಬ್ರಹ್ಮ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಹೆಸರು ಮಾಡಿದ್ದಾರೆ.
ಮೂಲತಃ ಲಕ್ಕುಂಡಿ ಗ್ರಾಮದವರಾದ ಶಿಲ್ಪಿ ಸುಮಲತಾ ಕವಲೂರ ಅವರು ಲಕ್ಕುಂಡಿ ಗ್ರಾಮದಲ್ಲಿಯ ಐತಿಹಾಸಿಕ ದೇವಾಲಯಗಳ ಶಿಲ್ಪಕಲೆಗಳ ಪ್ರದರ್ಶನ ನಡೆಸಿದ್ದು ಗೌರವ ಡಾಕ್ಟರೇಟ್ ಸಮಾರಂಭದಲ್ಲಿ ಸ್ಮರಿಸಲಾಯಿತು.
ಗೌರವ ಡಾಕ್ಟರೇಟ್ ಪಡೆದ ಸುಮಲತಾ ಕವಲೂರ ಅವರಿಗೆ ಶಿಲ್ಪಕಲೆ ಕೆತ್ತನೆಯ ಸಂಘಟನೆಗಳು ಅಭಿನಂದಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP