ಯುಗಾದಿ ಹಬ್ಬದ ನಿಮಿತ್ಯ ವಿಶೇಷ ಸಾರಿಗೆ ವ್ಯವಸ್ಥೆ
ವಿಜಯಪುರ, 01 ಮಾರ್ಚ್ (ಹಿ.ಸ.): ಆ್ಯಂಕರ್: ಯುಗಾದಿ ಹಬ್ಬದ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಮಾ.11 ರಿಂದ 22ರವರೆಗೆ ಶ್ರೀಶೈಲದಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ
ಯುಗಾದಿ ಹಬ್ಬದ ನಿಮಿತ್ಯ ವಿಶೇಷ ಸಾರಿಗೆ ವ್ಯವಸ್ಥೆ


ವಿಜಯಪುರ, 01 ಮಾರ್ಚ್ (ಹಿ.ಸ.):

ಆ್ಯಂಕರ್: ಯುಗಾದಿ ಹಬ್ಬದ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಮಾ.11 ರಿಂದ 22ರವರೆಗೆ ಶ್ರೀಶೈಲದಲ್ಲಿ ಜರುಗುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ತಿಳಿಸಿದ್ದಾರೆ.

ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಬ.ಬಾಗೇವಾಡಿ ಘಟಕ ಕೇಂದ್ರ ಸ್ಥಾನಗಳಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಹಾಗೂ ಎಲ್ಲ ಘಟಕಗಳ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ಕೊಡಲಾಗುವುದು. ಘಟಕ ಕೇಂದ್ರ ಸ್ಥಾನದಿಂದ ಹೆಚ್ಚುವರಿ ಬಸ್ಸುಗಳಲ್ಲದೇ ಪ್ರಯಾಣಿಕರು ಇಚ್ಛಿಸಿದ್ದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು. ಪ್ರಯಾಣಿಕರು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದ್ದಲ್ಲಿ ಈ ಸ್ಥಳಗಳಿಗೆ ತಗಲುವ ಪ್ರಯಾಣ ದರವನ್ನು ಪಾವತಿಸಿದ್ದಲ್ಲಿ ಮಂತ್ರಾಲಯ ಹಾಗೂ ಮಹಾನಂದಿಗೆ ಕಾರ್ಯಾಚರಣೆ ಮಾಡಲಾಗುವುದು.

ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-1 ಮೊ: 7760992263, ವಿಜಯಪುರ ಘಟಕ-2 ಮೊ: 7760992264, ಇಂಡಿ ಘಟಕ ವ್ಯವಸ್ಥಾಪಕರ ಮೊ: 7760992265, ಸಿಂದಗಿ ಘಟಕ ವ್ಯವಸ್ಥಾಪಕರ ಮೊ: 7760992266, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರ ಮೊ: 7760992267, ತಾಳಿಕೋಟೆ ಘಟಕ ವ್ಯವಸ್ಥಾಪಕರ ಮೊ: 7760992268, ಬ.ಬಾಗೇವಾಡಿ ಘಟಕ ವ್ಯವಸ್ಥಾಪಕರ ಮೊ: 7760998869, ವಿಜಯಪುರ ಕೇಂದ್ರ ಬಸ್ ನಿಲ್ದಾಣ ನಿಲ್ದಾಣಾಧಿಕಾರಿ ಮೊ: 7760992258 ಹಾಗೂ ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ: 08352-251344 ಸಂಸ್ಥೆಯ ಅಧಿಕಾರಿಗಳ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande