
ಹಾವೇರಿ, 01 ಮಾರ್ಚ್ (ಹಿ.ಸ.):
ಆ್ಯಂಕರ್:ಇಂದಿನ ಜಗತ್ತಿನ ಗೊಂದಲ-ಸಂಕಷ್ಟಗಳಿಗೆ ರೇಣುಕಾಚಾರ್ಯರು ಅವರ ‘ಸಿದ್ದಾಂತ ಶಿಖಾಮಣಿ’ಯಲ್ಲಿ ಸ್ಪಷ್ಟ ಪರಿಹಾರವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರಿನ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ನಡೆದ ಜಯಂತಿ, ಯುಗಮಾನೋತ್ಸವ, ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮಸಭೆಯಲ್ಲಿ ಮಾತನಾಡಿದ ಅವರು, “ಧರ್ಮಕ್ಕೆ ಜಯ ಅಂದರೆ ಸತ್ಯದ ದಾರಿಯೇ ಧರ್ಮದ ದಾರಿ. ಮಾನವ ಜನ್ಮಕ್ಕೆ ಜಯವಾಗಲಿ ಎಂಬ ರೇಣುಕಾಚಾರ್ಯರ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗಿದೆ” ಎಂದರು. ಕಾಮ-ಕ್ರೋಧ-ಮದ-ಮೋಹಗಳ ಬಂಧನದಿಂದ ಮಾನವತ್ವದತ್ತ ಸಾಗಬೇಕು; ಪ್ರೀತಿ-ವಿಶ್ವಾಸಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು ಎಂದು ಕರೆ ನೀಡಿದರು.
ಪಂಚಾಚಾರ್ಯರ ಪರಂಪರೆ, ಮಠಗಳ ಸೇವೆ ಮತ್ತು ಗುರುಸಂಸ್ಕಾರಗಳ ಮೂಲಕ ಹಳ್ಳಿಗಳಲ್ಲಿ ಸಂಸ್ಕೃತಿ ಉಳಿದಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa