ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಯುವ ವಿಜ್ಞಾನಿಗಳಾಗಿ : ಜಿ.ಶ್ರೀನಿವಾಸ್
ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಯುವ ವಿಜ್ಞಾನಿಗಳಾಗಿ : ಜಿ.ಶ್ರೀನಿವಾಸ್
ಕೋಲಾರ ನಗರದ ಬೆಂಗಳೂರು ಮಾಂಟೇಸರಿ ಶಾಲೆಯಲ್ಲಿಂದು ಏರ್ಪಡಿಸಿದ್ದ ವಿಜ್ಞಾನ ಚಿಂತನ-ಮAಥನ ಕಾರ್ಯಗಾರದಲ್ಲಿ ವಿದ್ಯಾರ್ಥಿ/ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.


ಕೋಲಾರ, ೦೧ ಮಾರ್ಚ್ (ಹಿ.ಸ):

ಆಂಕರ್ : ಯಾವುದೇ ವಿಷಯವನ್ನು ಅಭ್ಯಾಸ ಮಾಡುವಾಗ ಪ್ರಶ್ನಿಸದೆ ಒಪ್ಪಬೇಡಿ. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಈ ಮೂಲಕ ಯುವ ವಿಜ್ಞಾನಿಗಳಾಗಲು ಪ್ರಯತ್ನಿಸಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಬೆಂಗಳೂರು ಮಾಂಟೇಸರಿ ಶಾಲೆಯಲ್ಲಿಂದು ಏರ್ಪಡಿಸಿದ್ದ ವಿಜ್ಞಾನ ಚಿಂತನ-ಮ0ಥನ ಕಾರ್ಯಗಾರದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಶಿಕ್ಷಕರು ಮಾಡುವ ಪ್ರತಿ ಪಾಠಗಳನ್ನು ಅನ್ವೇಷಣಾ ಮನೋಭಾವ ಪ್ರಶ್ನಿಸುವ ಮನೋಭಾವದಿಂದ ಉತ್ತರಗಳನ್ನು ಹುಡುಕಿದಾಗ ಪ್ರಯೋಗಗಳ ಮೂಲಕ ಉತ್ತರ ಸದೃಢವಾಗುತ್ತದೆ ಈ ದೆಸೆಯಲ್ಲಿ ವಿದ್ಯಾರ್ಥಿಗಳು ಯುವ ಪ್ರತಿಭೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿ ಯುವವಿಜ್ಞಾನಿಗಳಾಗಲು ಸಾಧ್ಯವಾಗಿದ್ದು ಇದಕ್ಕಾಗಿ ಶಿಕ್ಷಕರ ಪಾಠಗಳನ್ನು ಗಮನವಿಟ್ಟು ಆಲಿಸಬೇಕು ಮತ್ತು ಕಲಿಕೆಯನ್ನು ನಿರಂತರ ಅಭ್ಯಾಸ ಮಾಡಿಕೊಳ್ಳಬೇಕು. ಈ ಮೂಲಕ ತಂದೆ ತಾಯಿ,ಹಾಗೂ ಶಿಕ್ಷಕರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಬಿಎಂಎಸ್ ಶಾಲೆಯ ಮುಖ್ಯೋಪಾಧ್ಯಾಯನಿ ರತ್ನಕುಮಾರಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುತ್ತಾ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರ ಜೊತೆಗೆ ಸಂಘ ಸಂಸ್ಥೆಗಳು ಕೂಡ ಸಹಕಾರಿಯಾಗಿದ್ದು ಇದಕ್ಕೆ ಪೋಷಕರ ನರವು ಸಿಕ್ಕಿದರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದರು

ಓದು ಬರಹ ಮತ್ತು ಅಕ್ಷರ ಗ ಜ್ಞಾನದ ಜೊತೆಗೆ ಸಹಪಠ್ಯ ಚಟುವಟಿಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಈ ಮೂಲಕ ವಿದ್ಯಾರ್ಥಿಗಳು ಸೌಲಭ್ಯ ಜೀವನಕ್ಕೆ ಪ್ರಾಥಮಿಕ ಪ್ರೌಢ ಹಂತದಲ್ಲಿ ಅಡಿಪಾಯ ಹಾಕಿಕೊಳ್ಳುವುದು ಒಳಿತು ಎಂದು ಮಿಮಿಕ್ರಿ ಕಲಾವಿದ ಪ್ರೇಮ್ ತಿಳಿಸಿದರು .

ಸಮಾರಂಭದಲ್ಲಿ ಜ್ಞಾನ ವಿಜ್ಞಾನ ಸಮಿತಿಯ ಮುಖಂಡರುಗಳಾದ ಕೆ.ವಿ ಜಗನ್ನಾಥ್, ಜಿಲ್ಲಾ ಕಾರ್ಯದರ್ಶಿ ಮಂಜುಳಾ, ಕೊಂಡ ರಾಜನಹಳ್ಳಿ ಮಂಜುಳಾ, ಉಪನ್ಯಾಸಕ ಶ್ರೀನಿವಾಸ ಪ್ರಸಾದ್, ಶಿಕ್ಷಕಿ ಪವಿತ್ರ, ಪಲ್ಲವಿ, ಝಾನ್ಸಿ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande