
ಗದಗ, 01 ಮಾರ್ಚ್ (ಹಿ.ಸ.):
ಆ್ಯಂಕರ್:ಗದಗ ಶಾಖಾ ವ್ಯಾಪ್ತಿಯಲ್ಲಿ ಬರುವ ನಾಗಾವಿ ಕ್ರಾಸ್ನಿಂದ ಮುಳಗುಂದದ ಬಸಾಪೂರ ಕ್ರಾಸ್ವರೆಗೆ ರಸ್ತೆಯ ಎರಡೂ ಬದಿಗಳಲ್ಲಿರುವ ಗಿಡಗಳ ಟೊಂಗೆಗಳನ್ನು ಕಟಾವಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಗಮನಕ್ಕೆ ತರಲಾಗಿದೆ.
ರಸ್ತೆಯ ಎಡಬದಿಯಲ್ಲಿ ಇರುವ 47 ಗಿಡಗಳ ಟೊಂಗೆಗಳು ಹಾಗೂ ಬಲಬದಿಯಲ್ಲಿ ಇರುವ 45 ಗಿಡಗಳ ಟೊಂಗೆಗಳು ಸೇರಿ ಒಟ್ಟು 92 ಗಿಡಗಳ ಟೊಂಗೆಗಳನ್ನು ಕಟಾವಣೆ ಮಾಡಲು ಉದ್ದೇಶಿಸಲಾಗಿದೆ.
ಈ ಕುರಿತು ಆಕ್ಷೇಪಣೆ ಅಥವಾ ತಕರಾರು ಸಲ್ಲಿಸಲು ಇಚ್ಛಿಸುವವರು ಮಾರ್ಚ್ 5ರೊಳಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಗದಗ ಉಪ ವಿಭಾಗ, ಬಿಂಕದಕಟ್ಟಿ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.
ಇದಲ್ಲದೆ, ಮಾರ್ಚ್ 6ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಾಗಾವಿ ಕ್ರಾಸ್ ಹಾಗೂ ಮುಳಗುಂದದ ಬಸಾಪೂರ ಕ್ರಾಸ್ ಪ್ರದೇಶದಲ್ಲಿ ನೇರವಾಗಿ ಹಾಜರಾಗಿ ಲಿಖಿತ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ನಿಗದಿತ ಅವಧಿಯೊಳಗೆ ತಕರಾರು ಸಲ್ಲಿಸದಿದ್ದಲ್ಲಿ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗದಗ ಉಪ ವಿಭಾಗ ಕಚೇರಿಯನ್ನು ದೂರವಾಣಿ ಸಂಖ್ಯೆ 08372-200978 ನಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP