ಸಯ್ಯದ್ ಅಲಿ ಖಮೇನಿ ನಿಧನ: ಇರಾನ್ನಲ್ಲಿ 40 ದಿನಗಳ ಶೋಕಾಚರಣೆ
ಟೆಹ್ರಾನ್, 01 ಮಾರ್ಚ್ (ಹಿ.ಸ.): ಆ್ಯಂಕರ್:ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅಮೆರಿಕ–ಇಸ್ರೇಲ್ ವಾಯುದಾಳಿಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಹಾಗೂ ಏಳು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಈ ವಿಷಯವನ್ನು ಇರಾನ್‌ನ ಸರ್ಕಾರ
Khameni


ಟೆಹ್ರಾನ್, 01 ಮಾರ್ಚ್ (ಹಿ.ಸ.):

ಆ್ಯಂಕರ್:ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅಮೆರಿಕ–ಇಸ್ರೇಲ್ ವಾಯುದಾಳಿಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಹಾಗೂ ಏಳು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಈ ವಿಷಯವನ್ನು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ ಭಾನುವಾರ ಬೆಳಿಗ್ಗೆ ಪ್ರಕಟಿಸಿದೆ.

ಖಮೇನಿ ಅವರ ನಿಧನದ ಸುದ್ದಿ ಹೊರಬಿದ್ದ ಕೂಡಲೇ ಇರಾನ್ ಮಂತ್ರಿಮಂಡಳಿ ತುರ್ತು ಸಭೆ ನಡೆಸಿ ರಾಷ್ಟ್ರವ್ಯಾಪಿ ಶೋಕಾಚರಣೆಯ ಘೋಷಣೆ ಮಾಡಿತು. ಜೊತೆಗೆ ಸರ್ಕಾರದ ಎಲ್ಲಾ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಾ ವಲಯಗಳಿಗೆ ಏಳು ದಿನಗಳ ರಜೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ಈ ಕುರಿತು ಇರಾನ್‌ ಇಂಟರ್ನ್ಯಾಷನಲ್ ವರದಿ ಮಾಡಿದೆ.

ಇರಾನ್ ಸಂವಿಧಾನದ ಪ್ರಕಾರ, ಸರ್ವೋಚ್ಚ ನಾಯಕನ ನಿಧನದ ನಂತರ ತಾತ್ಕಾಲಿಕ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಅವಕಾಶವಿದೆ. ಅದರಂತೆ, ಮೂವರು ಸದಸ್ಯರ ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಗಿದೆ ಎಂದು ಐಆರ್‌ಎನ್‌ಎ ತಿಳಿಸಿದೆ. ಹೊಸ ಸರ್ವೋಚ್ಚ ನಾಯಕನ ಆಯ್ಕೆ ನಡೆಯುವವರೆಗೆ ಈ ಮಂಡಳಿ ಆಡಳಿತಾಧಿಕಾರ ವಹಿಸಿಕೊಳ್ಳಲಿದೆ.

ಇದೇ ವೇಳೆ, ಇರಾನ್‌ನ ಪ್ರಭಾವಿ ಸೇನಾ ಘಟಕವಾದ ಐಆರ್‌ಜಿಸಿ ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ. “ಇಸ್ಲಾಮಿಕ್ ಗಣರಾಜ್ಯದ ಇತಿಹಾಸದಲ್ಲೇ ಅತ್ಯಂತ ಮಾರಕ ದಾಳಿ ನಡೆಸಲಾಗುವುದು” ಎಂದು ಐಆರ್‌ಜಿಸಿ ಹೇಳಿಕೆ ನೀಡಿದೆ. ಈ ಹೇಳಿಕೆಯನ್ನು ಅರೆ-ಅಧಿಕೃತ ಫಾರ್ಸ್ ಸುದ್ದಿ ಸಂಸ್ಥೆ ದೃಢಪಡಿಸಿದೆ.

ಖಮೇನಿ ಅವರು 1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಸ್ಲಾಮಿಕ್ ಕ್ರಾಂತಿಯ ಆದರ್ಶಗಳನ್ನು ಮುಂದುವರಿಸಿದ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ನಾಯಕರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ನಿಧನ ಮಧ್ಯಪ್ರಾಚ್ಯದಲ್ಲಿ ಭಾರೀ ರಾಜಕೀಯ ಅಸ್ಥಿರತೆ ಹಾಗೂ ಭದ್ರತಾ ಆತಂಕಗಳನ್ನು ಉಂಟುಮಾಡುವ ಸಾಧ್ಯತೆಯಿದೆ.

ಜಾಗತಿಕ ರಾಜಕೀಯ ವಲಯಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande