ಲೋಕಕಲ್ಯಾಣಕ್ಕಾಗಿ ಶನೇಶ್ವರ ದೇವಸ್ಥಾನದಲ್ಲಿ ಹೋಮ ಹವನ
ಬಳ್ಳಾರಿ, 01 ಮಾರ್ಚ್ (ಹಿ.ಸ.) ಆ್ಯಂಕರ್ : ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ಜ್ಯೋತಿಷ್ಯ ರತ್ನ ಗುರುರಾಜ್ ಕುಲಕರ್ಣಿ ಇವರ ನೇತೃತ್ವದಲ್ಲಿ ಅನಿಲ್ ಜೋಶಿ ಇವರಿಂದ ಲೋಕ ಕಲ್ಯಾಣಾರ್ಥವಾಗಿ ಇಂದು ಬೆಳಿಗ್ಗೆ 6:45ಕ್ಕೆ ಹೋಮ ಹವನ ಕಾರ್ಯಕ್ರಮಗಳನ್ನು ನಡೆಸಲಾಯ
ಲೋಕಕಲ್ಯಾಣಕ್ಕಾಗಿ ಶನೇಶ್ವರ ದೇವಸ್ಥಾನದಲ್ಲಿ ಹೋಮ ಹವನ


ಬಳ್ಳಾರಿ, 01 ಮಾರ್ಚ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶನೇಶ್ವರ ದೇವಸ್ಥಾನದಲ್ಲಿ ಜ್ಯೋತಿಷ್ಯ ರತ್ನ ಗುರುರಾಜ್ ಕುಲಕರ್ಣಿ ಇವರ ನೇತೃತ್ವದಲ್ಲಿ ಅನಿಲ್ ಜೋಶಿ ಇವರಿಂದ ಲೋಕ ಕಲ್ಯಾಣಾರ್ಥವಾಗಿ ಇಂದು ಬೆಳಿಗ್ಗೆ 6:45ಕ್ಕೆ ಹೋಮ ಹವನ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶನೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿಯಾದ ಘನಮಲ್ಲನಗೌಡ, ವ್ಯವಸ್ಥಾಪಕರಾದ ರಾಘವೇಂದ್ರ, ಮತ್ತೊಬ್ಬ ಆಡಳಿತ ಅಧಿಕಾರಿ ಡಾ. ಕೆ.ವಿ.ಎಸ್. ಪ್ರಸಾದ್, ನಗರದ ಪ್ರಖ್ಯಾತ ತಜ್ಞ ವೈದ್ಯರಾದ ಡಾ. ರೋಜಾವತಿ ಮತ್ತು ಶನೇಶ್ವರ ಗುಡಿಯ ಅರ್ಚಕರಾದ ವ್ಯಾಸಚಾರ್ಯ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಂತರ ಮಹಿಳಾ ಮಂಡಳಿಗಳಿಂದ ಸಮೂಹ ದೇವರನಾಮ ಸ್ಮರಣೆ ಸಂಕೀರ್ತನೆ ಹಾಗೂ ಸ್ವಾಮಿಗಳಿಂದ ಫಲ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಕಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಇಂಜಿನಿಯರ್ ಸಂಜೀವ ಪ್ರಸಾದ್, ನಂದ ಶಾಲೆಯ ಪ್ರಾಂಶುಪಾಲರಾದ ಕಿಶೋರ್ ಕುಮಾರ್ ಅಂಗಡಿ, ಶೃಂಗೇರಿ ಮಠದ ಬಿಕೆ ಬಿಎನ್ ಮೂರ್ತಿ, ವಕೀಲರಾದ ರಾಘವೇಂದ್ರ ಮೋಹನ್ ಮತ್ತು ರಾಘವಾ ಕಲಮಂದಿರದ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸಂಜೀವ್ ಪ್ರಸಾದ್ ವಸುಧಾ ನಿರೂಪಿಸಿದರು ಶಿಲ್ಪ ಜಡೇಸ್ ಪ್ರಾರ್ಥಿಸಿದರು ಕುಮಾರ ವಿಭಾಗ ಕುಲಕರ್ಣಿ ಹರಿಣಿ ಮತ್ತು ಸಂಧ್ಯಾ ಸ್ತ್ರೀ ಇವರುಗಳು ಭರತನಾಟ್ಯವನ್ನು ನಡೆಸಿಕೊಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande