ಹರ್ಡೇಕರ್ ಮಂಜಪ್ಪನವರ ಕೊಡುಗೆ ಅಪಾರ: ತೋಂಟದ ಶ್ರೀ
ಗದಗ, 01 ಮಾರ್ಚ್ (ಹಿ.ಸ.): ಆ್ಯಂಕರ್: ಹಡೇಕರ ಮಂಜಪ್ಪನವರು ಸತ್ಯ ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದವರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಹರ್ಡೇಕರ ಮಂಜಪ್ಪನವರ ಕೊಡುಗೆ ಬಹಳ ದೊಡ್ಡದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ಲಿಂಗಾಯತ ಪ್ರಗತಿಶೀಲ ಸಂಘದ
ಫೋಟೋ


ಗದಗ, 01 ಮಾರ್ಚ್ (ಹಿ.ಸ.):

ಆ್ಯಂಕರ್: ಹಡೇಕರ ಮಂಜಪ್ಪನವರು ಸತ್ಯ ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದವರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಹರ್ಡೇಕರ ಮಂಜಪ್ಪನವರ ಕೊಡುಗೆ ಬಹಳ ದೊಡ್ಡದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2786 ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಕ್ಷರ ಹಾಗೂ ಸಂಸ್ಕøತಿಯ ಪ್ರತೀಕ ಹಡೇಕರ್ ಮಂಜಪ್ಪನವರು. ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿ ಕೆಲಸ ಮಾಡಿದ್ದಾರೆ. ಹಸ್ತ ನಿರ್ಮಿತ ಪತ್ರಿಕೆಗಳನ್ನು ಬರೆದು, ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿಯ ವಿಷಯವನ್ನು ಪ್ರಚಾರ ಮಾಡುತ್ತಾ ಯುವಕರಲ್ಲಿ ಸ್ವಾತಂತ್ರ್ಯದ ಬಗ್ಗೆ, ಬಡತನದ ನಿರ್ಮೂಲನೆಯ ಬಗ್ಗೆ ಹೋರಾಡಿದರು ಮಕ್ಕಳ ಸಾಹಿತ್ಯವನ್ನು ಮೊಟ್ಟಮೊದಲು ಪ್ರಸ್ತುತ ಪಡಿಸಿದರು. ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾರಿದರು.

ಬಸವಣ್ಣನವರ ಚರಿತ್ರೆಯನ್ನು ಹಿಂದಿಯಲ್ಲಿ ಬರೆದು ಗಾಂಧಿಯವರಿಗೆ ಓದಲು ಕೊಟ್ಟರು. ಬಸವಣ್ಣನವರ ತತ್ವಗಳನ್ನು ತಿಳಿದುಕೊಂಡು ಗಾಂಧೀಜಿಯವರು ಮಾರು ಹೋಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸ್ಮರಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಮಾತನಾಡಿ, 1913 ರಲ್ಲಿ ಮೊಟ್ಟ ಮೊದಲು ಬಸವ ಜಯಂತಿಯನ್ನು ಆಚರಿಸಿದರು. ಅಂದಿನಿಂದ ಬಸವ ತತ್ವ ಪ್ರಸಾರ ನಾಡಿನ ಮಠ ಮಾನ್ಯಗಳಲ್ಲಿ ಪ್ರಾರಂಭವಾಯಿತು. ಭಜನೆಗಳನ್ನು ನಡೆಸಿದರು. ನಾಡಿನ ಸೇವೆಗಾಗಿ ಮದುವೆಯಾಗದೇ ಸನ್ಯಾಸತ್ವ ಸ್ವೀಕರಿಸಿ, ಆಹಾರ ಉಡುಗೆ ತೊಡುಗೆಯಲ್ಲಿ ಬದಲಾವಣೆ ತಂದರು. ಲೋಕವೇ ನನ್ನ ಮನೆ ವಿಶ್ವವೇ ನನ್ನ ಕುಟುಂಬ ಎಂಬ ಭಾವನೆ ತಾಳಿದರು. ಗಾಂಧೀಜಿಯವರ ಪ್ರಭಾವದಿಂದ, ಅವರಂತೆ ಬದುಕಿ ಬಾಳಿದರು. ಬಸವಣ್ಣನೆಂದರೆ ಎತ್ತಲ್ಲ ಎಂದು ಜಾಗ್ರತಿ ಮೂಡಿಸುತ್ತಾ, ನಿಜ ಬಸವತತ್ವದ ಪ್ರಸಾರ ಮಾಡಿದರು ಎಂದರು.

ಆಯುರ್ವೇದ ಚಿಕಿತ್ಸಾ ತಜ್ಞರಾದ ಡಾ. ಪರವೀನ್ ನದಾಫ್ ಮಾತನಾಡಿ, ದೈಹಿಕ ಮಾನಸಿಕ ಸಮತೋಲನದ ಸ್ಥಿತಿಯೇ ಆಧ್ಯಾತ್ಮ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಭಾಗ್ಯ ಮಹತ್ವದ್ದು. ಆರೋಗ್ಯವಂತ ವ್ಯಕ್ತಿಯೇ ಅತೀ ಶ್ರೀಮಂತ. ಆಹಾರವೇ ಔಷಧವಾಗಬೇಕು. ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಬೇಕು. ಉತ್ತಮ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಕೀರ್ತಿ ಹುಡೇದ ಹಾಗೂ ವಚನ ಚಿಂತನ ರತ್ನಾ ಪಾಟೀಲ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಎನ್.ಬಿ. ನಿಂಬಣ್ಣನವರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ 2019 ಅವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ರಾದ ಐ ಬಿ ಬೆನಕೊಪ್ಪರವರು ಸ್ವಾಗತಿಸಿದರು ಹಾಗೂ ವಿದ್ಯಾ ಪ್ರಭು ಗಂಜಿಹಾಳರವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande