ಪಂಚ ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ದಿಗೆ ತೀವ್ರ ಹಿನ್ನೆಡೆ : ಎಂ.ಎಂ.ಹಿರೇಮಠ
ಗದಗ, 01 ಮಾರ್ಚ್ (ಹಿ.ಸ.): ಆ್ಯಂಕರ್: 2023 ರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನರಿಗೆ ಪಂಚ ಗ್ಯಾರಂಟಿಗಳ ಆಸೆಯನ್ನು ತೋರಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೇಸ್ ಸರ್ಕಾರದ ಕೆಟ್ಟ ನೀತಿಯಿಂದ ಪಂಚ ಗ್ಯಾರಂಟಿಗಳಿಂದ ಹಿಂದೆ, ಮುಂದೆ ವಿಚಾರ ಮಾಡದೆ ಘೋಷಣೆ ಮಾಡಿದ್ದರಿಂದ ಗ್ಯಾರಂಟಿಗಳಿಂದ ರಾಜ್ಯ
ಫೋಟೋ


ಗದಗ, 01 ಮಾರ್ಚ್ (ಹಿ.ಸ.):

ಆ್ಯಂಕರ್: 2023 ರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನರಿಗೆ ಪಂಚ ಗ್ಯಾರಂಟಿಗಳ ಆಸೆಯನ್ನು ತೋರಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೇಸ್ ಸರ್ಕಾರದ ಕೆಟ್ಟ ನೀತಿಯಿಂದ ಪಂಚ ಗ್ಯಾರಂಟಿಗಳಿಂದ ಹಿಂದೆ, ಮುಂದೆ ವಿಚಾರ ಮಾಡದೆ ಘೋಷಣೆ ಮಾಡಿದ್ದರಿಂದ ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ದಿಗೆ ತೀವ್ರವಾದ ಹಿನ್ನೆಡೆಯಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಕೋಡುತ್ತೇನೆ ಎಂದು ಹೇಳಿ ಈ ಗ್ಯಾರಂಟಿಗಳಿಂದ ರಾಜ್ಯದ ಬಜೆಟ್ನಲ್ಲಿ ಎಷ್ಟು ಹಣ ಖರ್ಚು ಬರುತ್ತದೆ ಎಂದು ತಿಳಿಯದೆ ಕೇವಲ ಅಧಿಕಾರವನ್ನು ಹಿಡಿಯಬೇಕು ರಾಜ್ಯ ಸರ್ಕಾರಕ್ಕೆ ಇದರಿಂದ ಎಷ್ಟು ಹೊಡೆತ ಬಿಳುತ್ತದೆ ಎನ್ನುವ ಮುಂದಾಲೋಚನೆಯನ್ನು ಮಾಡದೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದರಿಂದ ಪ್ರತಿ ವರ್ಷ ಸುಮಾರು 55 ಸಾವಿರ ಕೋಟಿ ರೂ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವುದರಿಂದ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದ್ದು ಯಾವುದೇ ಹೊಸ ಕಾಮಗಾರಿ ಮಾಡಲು ದುಡ್ಡಿಲ್ಲದೆ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ 200 ಯೂನಿಟ್ವಿದ್ಯುತ್ ಫ್ರೀ, ಕಾನೂನು ಸಚಿವ ಎಚ್.ಕೆ.ಪಾಟೀಲರಿಗೂ 200 ಯೂನಿಟ್ ವಿದ್ಯುತ್ ಫ್ರೀ, ಆದಾಯ ತೆರಿಗೆ ಕಟ್ಟುವವರಿಗೂ ವಿದ್ಯುತ್ ಫ್ರೀ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಉಳ್ಳವರಿಗೂ ಫ್ರೀಯಾಗಿ 200 ಯೂನಿಟ್ ವಿದ್ಯುತ್ ಕೊಟ್ಟಿದ್ದರಿಂದ ಇವತ್ತು ವಿದ್ಯುತ್ ಶಕ್ತಿ ನಿಗಮಗಳು ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದು, ಹೊಸ ಯೋಜನೆಗಳನ್ನು ರೂಪಿಸಲು ಹಣದ ಕೊರತೆ ಕಾಣುತ್ತಿದ್ದು ಹಾಗು ಕಮರ್ಷಿಯಲ್ ವಿದ್ಯುತ್ ಬಳಕೆದಾರರ ಮೇಲೆ ಹೆಚ್ಚಿನ ಹೊರೆಯನ್ನು ರಾಜ್ಯ ಸರ್ಕಾರ ಹೊರಸಿದೆ.

ಶಕ್ತಿಯೋಜನೆಯ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಮಹಿಳೆಯರಿಗೂ ಹಾಗು ಸಾವಿರಾರು ರೂಪಾಯಿ ಸಂಬಳ ಪಡೆಯುವ ಮಹಿಳೆಯರಿಗೆ ಆದಾಯ ತೆರಿಗೆ ಪಾವತಿಸುವ ಮಹಿಳೆಯರಿಗೂ ಕೂಡಾ ಉಚಿತವಾಗಿ ಬಸ್ನಲ್ಲಿ ಅಡ್ಡಾಡಲು ಅನುಮತಿ ನೀಡಿದ್ದರಿಂದ ಇವತ್ತು ಸಾರಿಗೆ ಸಂಸ್ಥೆ ದೀವಾಳಿಯಾಗಿದೆ. ಸಾರಿಗೆ ನೌಕರರ ಸರಿಯಾದ ಸಮಯಕ್ಕೆ ಸಂಬಳ ಕೊಡಲು ಕೂಡ ತೀವ್ರವಾದ ತೊಂದರೆಯಲ್ಲಿ ಸಾರಿಗೆ ಇಲಾಖೆ ತೊಳಲಾಡುತ್ತಿದೆ. ಹೊಸ ಬಸ್ ಖರೀದಿ ಮಾಡಲು ಇದ್ದ ಬಸ್ಗಳ ಬಿಡಿ ಭಾಗ ಖರೀದಿಸಲು, ಡಿಸೈಲ್ ಕೊಳ್ಳಲು, ಸಾರಿಗೆ ನಿಗಮಕ್ಕೆ ತೀವ್ರವಾದ ತೊಂದರೆಯಾಗಿದೆ. ಯುವಕರಿಗೆ ನೌಕರಿಗಳನ್ನು ಹಾಗು ಹೊಸ ಉದ್ಯೋಗಗಳನ್ನು ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ನಿರುದ್ಯೋಗಿ ಕೆಲವೇ ಯುವಕರಿಗೆ ತಿಂಗಳಿಗೆ 3 ಸಾವಿರ ಕೊಡುತ್ತೇವೆ ಅಂತ ಹೇಳುವದು ಯಾವ ನ್ಯಾಯ?

ಪಂಚ ಗ್ಯಾರಂಟಿಗಳಿಗಾಗಿ ಮುಖ್ಯಮಂತ್ರಿಗಳು ಹೆಚ್ಚಿನ ಸಾಲವನ್ನು ಮಾಡಿ ರಾಜ್ಯವನ್ನು ಬಿಕಾರಿ ರಾಜ್ಯವನ್ನಾಗಿ ಮಾಡಲು ಹೊರಟಿರುವರು. ಹಿಂದಿನ ಯಾವ ಮುಖ್ಯಮಂತ್ರಿಗಳು ಇಷ್ಟೊಂದು ಸಾಲವನ್ನು ಮಾಡಿದ್ದಿಲ್ಲಾ. ಆದರೆ ಸಿದ್ಧರಾಮಯ್ಯನವರ ಹಳಿ ತಪ್ಪಿದ ಆಡಳಿತದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. 149 ಜನರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಅವರಿಗೆ ವೇತನ ಭತ್ತೆ ಸೇರಿ ವಿವಿಧ ಸೌಲಭ್ಯ ನೀಡಬೇಕಾಗುತ್ತದೆ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ. ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಹಾಗು ಅವರ ಆಪ್ತ ಕಾರ್ಯದರ್ಶಿಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ರಾಜ್ಯದಲ್ಲಿ ತಘಲಕ್ ಸರ್ಕಾರ ಇದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ಖಜಾನೆ ಖಾಲಿ ಮಾಡಿ ಎಲ್ಲ ವಸ್ತುಗಳ ಬೆಲೆಗಳನ್ನು ಏರಿಸುತ್ತ ಹೊರಟಿದೆ.

ಆರ್ಥಿಕವಾಗಿ, ದುರ್ಭಲ ವರ್ಗದವರಿಗೆ, ಬಡವರಿಗೆ ಭಾಗ್ಯಗಳನ್ನು ನೀಡಲಿ ಆದರೆ ಅಧಿಕಾರದ ಆಸೆಗಾಗಿ ತಮ್ಮ ಖರ್ಚಿಯನ್ನು ಭದ್ರಪಡಿಸಿಕೊಳ್ಳಲು ರಾಜ್ಯ ಖಜಾನೆಯನ್ನು ಖಾಲಿ ಮಾಡಿ ಸಾಲದ ರೂಪದಿಂದ ಹಣವನ್ನು ತಂದು ಗ್ಯಾರಂಟಿ ಯೋಜನೆಗಳಿಗೆ ಕೊಡುವ ಅವಶ್ಯಕತೆಯಾದರೂ ಏನಿದೆ? ಎಂದು ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠ ರಾಜ್ಯ ಸರ್ಕಾರದ ತಘಲಕ್ ಆಡಳಿತವನ್ನು ತೀವ್ರವಾಗಿ ಖಂಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande