
ದಾವಣಗೆರೆ, 01 ಮಾರ್ಚ್ (ಹಿ.ಸ.):
ಆ್ಯಂಕರ್:
ದಾವಣಗೆರೆ ಜಿಲ್ಲಾ ಪೋಲಿಸ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ”, “ಡ್ರಗ್ಸ್ ಮುಕ್ತ ದಾವಣಗೆರೆ”, “ಸೈಬರ್ ಸೇಫ್ ಸಿಟಿ”, “112 ಸಹಾಯವಾಣಿ”, “ಫಿಟ್‌ನೆಸ್ ಫಾರ್ ಆಲ್” ಹಾಗೂ “ಮಹಿಳಾ ಸುರಕ್ಷತೆ” ಘೋಷಣೆಗಳಡಿ ಭಾನುವಾರ ದಾವಣಗೆರೆ ನಗರದಲ್ಲಿ ಮೂರನೇ ಬಾರಿ “10ಕೆ ಮೆರಥಾನ್ ಹಾಗೂ 5ಕೆ ಮೆರಥಾನ್ ಪೊಲೀಸರೊಂದಿಗೆ ಓಟ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮೆರಥಾನ್‌ಗೆ ಜಿಲ್ಲಾಧಿಕಾರಿ ಜಿ ಎಂ ಗಂಗಾಧರ ಸ್ವಾಮಿ, ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್ ಟಿ. ನ್ಯಾಯಾಧೀಶರಾದ ಮಹಾವೀರ್ ಕರೆಣ್ಣನವರ್, ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠ್ಠಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕ ಮಾನವ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೂರಾರು ಸ್ಪರ್ಧಾಳುಗಳು ಭಾಗವಹಿಸಿ ಓಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa