
ವಿಜಯಪುರ, 01 ಮಾರ್ಚ್ (ಹಿ.ಸ.):
ಆ್ಯಂಕರ್: ವಿಶೇಷ ಘಟಕಯೋಜನೆ-ಗಿರಿಜನ ಉಪಯೋಜನೆಯಡಿ 10+1 ಕುರಿ-ಮೇಕೆ ಘಟಕ ಅನುಷ್ಟಾನಗೊಳಿಸಲು ಸಹಾಯಧನ ನೀಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅರ್ಜಿ ಆಹ್ವಾನಿಸಿದೆ.
ಈ ಸಹಾಯಧನ ಪಡೆಯಲಿಚ್ಚಿಸುವವರು ಜಿಲ್ಲೆಯ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಾಗಿದ್ದು. ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರಬೇಕು. ಅಂತಹವರು ಮಾತ್ರ ಅರ್ಜಿ ಸಲ್ಲಿಸಬೇಕು.
ಜಿಲ್ಲೆಗೆ ಪರಿಶಿಷ್ಟ ಜಾತಿಯ-27 ಹಾಗೂ ಪರಿಶಿಷ್ಟ ಪಂಗಡದ-02 ಒಟ್ಟು 29 ನಿಗದಿಪಡಿಸಿದ್ದು, ಅದನ್ನು 8 ವಿಧಾನಸಭಾ ಮತಕ್ಷೇತ್ರದವಾರು ನಿಗದಿ ಪಡಿಸಿದೆ.
ಬಬಲೇಶ್ವರ ಮತಕ್ಷೇತ್ರದ ಒಟ್ಟು-04 ಘಟಕಗಳಲ್ಕಿ ಪುರುಷ-02, ಮಹಿಳೆ-02, ವಿಜಯಪುರ ನಗರ ಮತಕ್ಷೇತ್ರದ ಒಟ್ಟು-03ಘಟಕಗಳು ಪುರುಷ-02, ಮಹಿಳೆ-01, ಬಸವನಬಾಗೇವಾಡಿ ಮತಕ್ಷೇತ್ರದ ಒಟ್ಟು-04ಘಟಕಗಳು ಪುರುಷ-02, ಮಹಿಳೆ-02, ಇಂಡಿ ಮತಕ್ಷೇತ್ರದ ಒಟ್ಟು-04 ಘಟಕಗಳು ಪುರುಷ-02,ಮಹಿಳೆ-02, ಮುದ್ದೇಬಿಹಾಳ ಮತಕ್ಷೇತ್ರದ ಒಟ್ಟು-04ಘಟಕಗಳು ಪುರುಷ-02, ಮಹಿಳೆ-02, ನಾಗಠಾಣ ಮತಕ್ಷೇತ್ರದ ಒಟ್ಟು-04 ಘಟಕಗಳು ಪುರುಷ-02, ಮಹಿಳೆ-02,
ಸಿಂದಗಿ ಮತಕ್ಷೇತ್ರದ ಒಟ್ಟು-03 ಘಟಕಗಳು ಪುರುಷ-02 ಮಹಿಳೆ-01 ಹಾಗೂ
ದೇವರಹಿಪ್ಪರಗಿ ಮತಕ್ಷೇತ್ರದ ಒಟ್ಟು-03 ಘಟಕಗಳು ಪುರುಷ-02, ಮಹಿಳೆ-01 ಅರ್ಹ ಫಲಾನುಭವಿಗಳನ್ನು ವಿಧಾನ ಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಆರ್.ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಮತ್ತು ಪ್ರುಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿ
ಕೊಂಡಿರಬೇಕು. 18 ರಿಂದ 60 ವರ್ಷದ ವಯೋ ಮಿತಿಯೊಳಗಿರಬೇಕು
ಮಾ. 3ರಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವಿಜಯಪುರ ಕಚೇರಿಯಿಂದ ಅರ್ಜಿ ಪಡೆದು, ಮಾ. 12 ರೊಳಗಾಗಿ ಖುದ್ದಾಗಿ ಎರಡು ಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ:9902363143 08352,200079 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ
ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande