
ನವದೆಹಲಿ, 01 ಮಾರ್ಚ್ (ಹಿ.ಸ.):
ಆ್ಯಂಕರ್:ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಇಂದು ನಿಗದಿಯಾಗಿದ್ದ ಅನೇಕ ಯುರೋಪ್ ತೆರಳುವ ಹಾಗೂ ಯುರೋಪ್‌ನಿಂದ ಆಗಮಿಸಬೇಕಿದ್ದ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ಅತ್ಯುನ್ನತ ಆದ್ಯತೆಯಾಗಿದ್ದು, ಪರಿಸ್ಥಿತಿಯ ನಿಕಟ ಮೇಲ್ವಿಚಾರಣೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈಗಾಗಲೇ ಘೋಷಿಸಲಾದ ರದ್ದಾದ ಸೇವೆಗಳ ಜೊತೆಗೆ, ಇಂದಿನ ವಿಮಾನಗಳು ಸಹ ಕಾರ್ಯನಿರ್ವಹಿಸುವುದಿಲ್ಲ ಅವುಗಳ ವಿವರ ಇಲ್ಲಿದೆ..
ಮುಂಬೈ–ಲಂಡನ್ (ಹೀಥ್ರೂ) AI131/AI130;
ದೆಹಲಿ–ಬರ್ಮಿಂಗ್ಹ್ಯಾಮ್ AI113/AI118;
ದೆಹಲಿ–ಆಮ್ಸ್ಟರ್‌ಡ್ಯಾಮ್ AI155/AI156;
ದೆಹಲಿ–ಜುರಿಚ್ AI151/AI152;
ದೆಹಲಿ–ಮಿಲನ್ AI137/AI138;
ದೆಹಲಿ–ವಿಯೆನ್ನಾ AI153/AI154;
ಬೆಂಗಳೂರು–ಲಂಡನ್ (ಹೀಥ್ರೂ) AI133/AI132;
ದೆಹಲಿ–ಕೋಪನ್‌ಹ್ಯಾಗನ್ AI157/AI158;
ದೆಹಲಿ–ಲಂಡನ್ (ಹೀಥ್ರೂ) AI2017/AI2018 ಹಾಗೂ AI2015/AI2016;
ದೆಹಲಿ–ಫ್ರಾಂಕ್‌ಫರ್ಟ್ AI2029/AI2030.
ರದ್ದಾದ ಕ್ರಮದಿಂದ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಏರ್ ಇಂಡಿಯಾ, ತೊಂದರೆಗೊಳಗಾದ ಪ್ರಯಾಣಿಕರಿಗೆ ಮರುಬುಕಿಂಗ್ ಮತ್ತು ಪರ್ಯಾಯ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಸಂಬಂಧಿತ ಪ್ರಯಾಣಿಕರಿಗೆ ಅವರ ನೋಂದಾಯಿತ ಸಂಪರ್ಕ ಸಂಖ್ಯೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಪ್ರಯಾಣಿಕರು ತಮ್ಮ ವಿಮಾನಗಳ ಇತ್ತೀಚಿನ ಸ್ಥಿತಿಯನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 24×7 ಕಾಲ್‌ಸೆಂಟರ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa