
ಹಾವೇರಿ, 28 ಫೆಬ್ರವರಿ (ಹಿ.ಸ.):
ಆ್ಯಂಕರ್:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುರ್ಚಿಯ ಗುದ್ದಾಟ ಬಜೆಟ್ ನಂತರ ತೀವ್ರವಾಗಿರುವ ಅಂತಿಮ ಘಟಕ್ಕೆ ತಲುಪಲಿದೆ. ಅದು ಕಾದಾಟವೇ ಆಗಲಿದೆ. ಸಂಧಾನ ಆಗಲು ಸಾಧ್ಯವಿಲ್ಲ. ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಮೇಲೆ ಜನರ ವಿಶ್ವಾಸ ಸಂಪೂರ್ಣ ಹೋಗಿದೆ. ಜನ ಈ ಸರ್ಕಾರ ಕಿತ್ತೊಗೆಯಲು ಕಾಯುತ್ತಿದ್ದಾರೆ. ಈಗ ಅದರ ಕಾವು ಶಾಸಕರಿಗೆ ಮುಟ್ಟುತ್ತಿದೆ. ಅನಿಶ್ಚಿತೆಯ ವಾತಾವರಣ ಬಹಳ ದಿನ ಅದರ ತಾವು ಮತ್ತೊಮ್ಮೆ ಆರಿಸಿ ಬರುವುದಿಲ್ಲ ಎನ್ನುವ ಆತಂಕ ಶಾಸಕರಿಗಿದೆ. ಕೆಲವರು ವಿದೇಶಕ್ಕೆ ಕೆಲವರು ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಲು ಯಾವುದೇ ಶಕ್ತಿ ಇಲ್ಲ. ಬರುವಂತಹ ದಿನಗಳಲ್ಲಿ ಇವರನ್ನು ಜನರು ಫಾರಿನ್ನಿಗಾದರೂ, ದೆಹಲಿಗಾದರೂ ಕರ್ನಾಟಕದ ಚುಕ್ಕಾಣಿಯನ್ನು ಕೈಬಿಡಿಸಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa