ಧಾರವಾಡ ಸಂಸದ ಕ್ರೀಡಾ ಮಹೋತ್ಸವ: ಶಿಗ್ಗಾಂವಿ ಸ್ವಸ್ತಿಕ್ ತಂಡ ಕಬಡ್ಡಿ ಚಾಂಪಿಯನ್
ಧಾರವಾಡ, 28 ಫೆಬ್ರವರಿ (ಹಿ.ಸ.): ಆ್ಯಂಕರ್: ಯುವ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಸಂಸದ ಕ್ರೀಡಾ ಮಹೋತ್ಸವವು ಕ್ರೀಡಾ ಸಂಭ್ರಮದ ನಡುವೆ ಯಶಸ್ವಿಯಾಗಿ ನಡೆಯಿತು. ವಿವಿಧ ಕ್ರೀಡೆಗಳಲ್ಲಿ ನಡೆದ ತೀವ್ರ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಹಲವು ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ.
Mp sports


ಧಾರವಾಡ, 28 ಫೆಬ್ರವರಿ (ಹಿ.ಸ.):

ಆ್ಯಂಕರ್:

ಯುವ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಸಂಸದ ಕ್ರೀಡಾ ಮಹೋತ್ಸವವು ಕ್ರೀಡಾ ಸಂಭ್ರಮದ ನಡುವೆ ಯಶಸ್ವಿಯಾಗಿ ನಡೆಯಿತು. ವಿವಿಧ ಕ್ರೀಡೆಗಳಲ್ಲಿ ನಡೆದ ತೀವ್ರ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಹಲವು ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ.

ಪುರುಷರ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಶಿಗ್ಗಾಂವಿಯ ಸ್ವಸ್ತಿಕ್ ತಂಡ ಅದ್ಭುತ ತಂಡಸಮನ್ವಯ ಮತ್ತು ದಾಳಿಯ ಕೌಶಲ್ಯ ಪ್ರದರ್ಶಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಖೋ-ಖೋ ಪುರುಷರ ವಿಭಾಗದಲ್ಲಿ ಸಂಶಿಯ ನ್ಯೂ ಸ್ಪೋರ್ಟ್ ಕ್ಲಬ್ ತಂಡ ಟ್ರೋಫಿ ಗೆದ್ದುಕೊಂಡಿತು.

ಮಹಿಳಾ ವಿಭಾಗದ ಕಬಡ್ಡಿಯಲ್ಲಿ ನವರಂಗ ಹೊಸಳ್ಳಿ, ಶಿಗ್ಗಾಂವಿ ತಂಡ ಚಾಂಪಿಯನ್ ಪಟ್ಟಕ್ಕೇರಿದರೆ, ಖೋ-ಖೋದಲ್ಲಿ ಎಸ್‌ ಜೆ ಎಸ್‌ ಎಸ್ ಬೈರಿದೇವರಕೊಪ್ಪ, ಹುಬ್ಬಳ್ಳಿ ತಂಡವು ಜಯಶಾಲಿಯಾಯಿತು. ವಾಲಿಬಾಲ್‌ನಲ್ಲಿ ಬ್ಯಾಹಟ್ಟಿ ಬ ತಂಡಗಳು ಪ್ರಭಾವಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡವು.

ಕಬಡ್ಡಿ, ವಾಲಿಬಾಲ್ ಹಾಗೂ ಖೋ-ಖೋ ಕ್ರೀಡೆಗಳ ಜೊತೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿಯೂ ಕ್ರೀಡಾಪಟುಗಳು ಉತ್ಸಾಹಭರಿತ ಸ್ಪರ್ಧೆ ನೀಡಿದ್ದು, ಮಹೋತ್ಸವಕ್ಕೆ ವಿಶೇಷ ಮೆರುಗು ತಂದಿತು. ಪ್ರತಿಯೊಂದು ವಿಭಾಗದಲ್ಲೂ ವಿನ್ನರ್ ಮತ್ತು ರನ್ನರ್-ಅಪ್ ತಂಡಗಳು ಉತ್ತಮ ಕ್ರೀಡಾಸ್ಫೂರ್ತಿಯನ್ನು ತೋರಿದವು.

ಟ್ರೋಫಿ ವಿತರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಕ್ರೀಡಾ ಮಹೋತ್ಸವ ಯುವಶಕ್ತಿಗೆ ಪ್ರೇರಣೆಯಾಗಲಿದ್ದು, ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು. ಎಲ್ಲಾ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಸೇರಿದಂತೆ ಗಣ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande