ಮುಸ್ಲಿಂ ಲೀಗ್ನ ದ್ವೇಷವೇ ದೇಶ ವಿಭಜನೆಗೆ ಕಾರಣ ; ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿ : ಮೋದಿ
ಅಜ್ಮೀರ್, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಜ್ಮೀರ್ ನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಮುಸ್ಲಿಂ ಲೀಗ್ನ ಭಾರತದ ಮೇಲಿನ ದ್ವೇಷವೇ ದೇಶದ ವಿಭಜನೆಗೆ ಕಾರಣವಾಯಿತು. ಇಂದು ಕಾಂಗ್ರೆಸ್ ಕೂಡ ದೇಶವನ್ನು ದುರ್ಬಲಗೊಳಿಸುವ ರಾಜಕೀಯ ಮಾಡುತ್ತಿದ
Pm


ಅಜ್ಮೀರ್, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಜ್ಮೀರ್ ನಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಮುಸ್ಲಿಂ ಲೀಗ್ನ ಭಾರತದ ಮೇಲಿನ ದ್ವೇಷವೇ ದೇಶದ ವಿಭಜನೆಗೆ ಕಾರಣವಾಯಿತು. ಇಂದು ಕಾಂಗ್ರೆಸ್ ಕೂಡ ದೇಶವನ್ನು ದುರ್ಬಲಗೊಳಿಸುವ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದರು.

ರಾಜ್ಯಕ್ಕೆ ₹16,680 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ವೇಳೆ ಭಾರತೀಯ ಯುವ ಕಾಂಗ್ರೆಸ್ ನಡೆಸಿದ ‘ಶರ್ಟ್ಲೆಸ್ ಪ್ರತಿಭಟನೆ’ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನವಾಗಿತ್ತು ಎಂದು ಟೀಕಿಸಿದರು. ಜಗತ್ತಿನ ನಾಯಕರು ಭಾರತದ ಸಾಧನೆಯನ್ನು ಶ್ಲಾಘಿಸುತ್ತಿದ್ದಾಗ, ಕಾಂಗ್ರೆಸ್ ವಿದೇಶಿ ಅತಿಥಿಗಳ ಮುಂದೆ ದೇಶದ ಚಿತ್ರ ಹಾಳು ಮಾಡಲು ಯತ್ನಿಸಿದೆ ಎಂದು ಹೇಳಿದರು.

“ಮುಸ್ಲಿಂ ಲೀಗ್ ಭಾರತವನ್ನು ದ್ವೇಷಿಸುತ್ತಿತ್ತು. ಅದರ ಪರಿಣಾಮವೇ ವಿಭಜನೆ. ಇತಿಹಾಸ ಇದಕ್ಕೆ ಸಾಕ್ಷಿ. ಇಂದು ಕಾಂಗ್ರೆಸ್ ಕೂಡ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಶಕ್ತಿಗಳೊಂದಿಗೆ ನಿಂತಿದೆ,” ಎಂದು ಆರೋಪಿಸಿದರು. ಕಾಂಗ್ರೆಸ್ ಅನ್ನು “ಎಂಎಂಸಿ – ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್” ಎಂದು ಕರೆದ ಅವರು, ರಕ್ಷಣಾ ಒಪ್ಪಂದ ಹಗರಣಗಳ ವಿಚಾರದಲ್ಲಿಯೂ ಹಿಂದಿನ ಸರ್ಕಾರವನ್ನು ಟೀಕಿಸಿದರು. ಸೈನಿಕರ ‘ಒನ್ ರ್ಯಾಂಕ್ ಒನ್ ಪೆನ್ಷನ್’ ವಿಚಾರದಲ್ಲಿ ತಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande