ವಾಣಿಜ್ಯ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದರೆ ದಂಡ
ವಿಜಯಪುರ, 28 ಫೆಬ್ರವರಿ (ಹಿ.ಸ.): ಆ್ಯಂಕರ್: ವಿಜಯಪುರ ನಗರದ ವಾಣಿಜ್ಯ ಪ್ರದೇಶಗಳಲ್ಲಿ ಕೆಲ ಅಂಗಡಿ ಮುಂಗಟ್ಟಿನ ಮಾಲೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ತಿಳುವಳಿಕೆ ನೀಡಿದರೂ ಇದು ಪುನರಾವರ್ತಿತವಾದರೆ ದಂಡ ವಿಧಿಸಲಾಗುವುದು ಎಂದು ಮಹಾ ನಗರ ಪಾಲಿಕೆ ಆಯುಕ್ತರು
ವಾಣಿಜ್ಯ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದರೆ ದಂಡ


ವಿಜಯಪುರ, 28 ಫೆಬ್ರವರಿ (ಹಿ.ಸ.):

ಆ್ಯಂಕರ್: ವಿಜಯಪುರ ನಗರದ ವಾಣಿಜ್ಯ ಪ್ರದೇಶಗಳಲ್ಲಿ ಕೆಲ ಅಂಗಡಿ ಮುಂಗಟ್ಟಿನ ಮಾಲೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ತಿಳುವಳಿಕೆ ನೀಡಿದರೂ ಇದು ಪುನರಾವರ್ತಿತವಾದರೆ ದಂಡ ವಿಧಿಸಲಾಗುವುದು ಎಂದು ಮಹಾ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ

ನಗರದ ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ ವಾಣಿಜ್ಯ ಪ್ರದೇಶಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟಿನ ಮಾಲೀಕರು ತಮ್ಮ ಅಂಗಡಿಯ ಮುಂದೆ ಕಡ್ಡಾಯವಾಗಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಕ್ಕಾಗಿ ಡಸ್ಟ್ ಬಿನ್ ಗಳನ್ನು ಅಳವಡಿಸಿಕೊಳ್ಳಬೇಕು.

ಹಾಗೆಯೇ,ತಮ್ಮ ಉದ್ದಿಮೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಯ ಬದಿ ಅಥವಾ ಇತರೆ ಜಾಗಗಳಲ್ಲಿ ಎಸೆಯದೇ ಪ್ರತಿದಿನ ಸಂಜೆ ವಿಜಯಪುರ ಮಹಾನಗರಪಾಲಿಕೆ ವಾಣಿಜ್ಯ ಕಸ ಸಂಗ್ರಹಣಾ ವಾಹನಕ್ಕೆ ತ್ಯಾಜ್ಯವನ್ನು ಹಸಿ-ಕಸ ಮತ್ತು ಒಣಕಸವನ್ನಾಗಿ ವಿಂಗಡಿಸಿ ನೀಡಬೇಕು.

ಒಂದು ವೇಳೆ ಉದ್ದಿಮೆದಾರರು ರಸ್ತೆಯ ಬದಿಗಳಲ್ಲಿ-ಖಾಲಿ ನಿವೇಶನಗಳಲ್ಲಿ ತ್ಯಾಜ್ಯವನ್ನು ಎಸೆಯುವುದು ಕಂಡುಬಂದಲ್ಲಿ, ಮೊದಲನೆಯ ಬಾರಿಗೆ ಸೂಕ್ತ ದಂಡವನ್ನು ಪಾಲಿಕೆಯ ವತಿಯಿಂದ ವಿಧಿಸಲಾಗುವುದು. ಮತ್ತೆ ಪುನರಾವರ್ತನೆಯಾದಲ್ಲಿ ಅಂಗಡಿಗೆ ಬೀಗಮುದ್ರೆ, ಜುಲ್ಮಾನೆ ವಿಧಿಸಲಾಗುವುದು ಎಂದೂ ನಗರದ ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande