121ನೇ ದಿನದ ಧರಣಿ ಅಂತ್ಯ ; ಹೋರಾಟಕ್ಕೆ ಹೊಸರೂಪಕ್ಕೆ ಸಲಹೆ
ಕೊಪ್ಪಳ , 28 ಫೆಬ್ರವರಿ (ಹಿ.ಸ.): ಆ್ಯಂಕರ್ : ನಗರಸಭೆ ಮುಂದಿನ ಟೆಂಟ್ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ 121ನೇ ದಿನದ ಬಲ್ಡೋಟ ತೊಲಗಿಸಿ ಧರಣಿಯಲ್ಲಿ ಅನೇಕ ಮುಖಂಡರು ವಿಭಿನ್ನ ಹೊಸರೂಪದ ಹೋರಾಟಕ್ಕೆ ಸಲಹೆ ನೀಡಿದರು.
Advice for a new approach to the struggle


ಕೊಪ್ಪಳ , 28 ಫೆಬ್ರವರಿ (ಹಿ.ಸ.):

ಆ್ಯಂಕರ್ : ನಗರಸಭೆ ಮುಂದಿನ ಟೆಂಟ್ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ 121ನೇ ದಿನದ ಬಲ್ಡೋಟ ತೊಲಗಿಸಿ ಧರಣಿಯಲ್ಲಿ ಅನೇಕ ಮುಖಂಡರು ವಿಭಿನ್ನ ಹೊಸರೂಪದ ಹೋರಾಟಕ್ಕೆ ಸಲಹೆ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹೆಚ್. ಎಸ್. ಪಾಟೀಲ್ ಅವರು ಮಾತನಾಡಿ, ಕೇಂದ್ರ ಎನ್.ಡಿ.ಎ. ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕಿ ಇಷ್ಟು ದೊಡ್ಡ ಸಂಖ್ಯೆಯ ಜನರ ಆರೋಗ್ಯದ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅತ್ತ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಇನ್ನೂ ಕೊಪ್ಪಳಕ್ಕೆ ಬಂದು ಜನರ ಮನವೊಲಿಸುತ್ತೀನಿ, ಗವಿಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೀನಿ ಅನ್ನುತ್ತಿರುವದು ಅತ್ಯಂತ ಖೇದಕರ ಸಂಗತಿ. ಇಲ್ಲಿನ ಬಲ್ಡೋಟ ಮೊದಲು ಜಾಗ ಖಾಲಿ ಮಾಡಬೇಕು, ಅಲ್ಲಿಂದ ಉಳಿದ ಅನೇಕ ವಿಷಾನೀಲ ಉಗುಳುವ ಕಾರ್ಖಾನೆಗಳು ಹದ್ದುಬಸ್ತಿಗೆ ಬರಬೇಕು, ಯಾವುದೇ ಕಾರ್ಖಾನೆ ವಿಸ್ತರಣೆ ಆಗಬಾರದು ಎಂದರು.

ಧರಣಿಯಲ್ಲಿ ಗಾಯಕರಾದ ಸದಾಶಿವ ಪಾಟೀಲ್, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಪ್ರಕಾಶಕಿ ಮಾಲಾ ಡಿ. ಬಡಿಗೇರ, ಸರೋಜಾ ಬಾಕಳೆ, ಎಸ್. ಬಿ. ರಾಜೂರ, ಪ್ರೊ. ಡಾ. ಬಸವರಾಜ ಪೂಜಾರ, ಮಹಾದೇವಪ್ಪ ಮಾವಿನಮಡು, ರಾಮಲಿಂಗಯ್ಯ, ಸಿ. ಬಿ. ಪಾಟೀಲ್, ಗಂಗಾಧರ್ ಖಾನಾಪೂರ, ಜಿ. ಬಿ. ಪಾಟೀಲ್, ಮಂಜುನಾಥ, ಲಲಿತಾ ಮಜ್ಜಿಗಿ, ಸಂತೋಷ ದೇಶಪಾಂಡೆ, ಬಸವರಾಜಪ್ಪ ಶೆಟ್ಟರ್, ಶಂಭುಲಿಂಗಪ್ಪ ಹಾರಗೇರಿ, ಗಂಗಮ್ಮ ಕೊಡೇಕಲ್, ಸಂಜೀವಮ್ಮ ಮುಂಡರಗಿ ಮುಂತಾದವರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande