
ನವದೆಹಲಿ, 25 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಎಐ ಶೃಂಗಸಭೆಯಲ್ಲಿ ಅರೆನಗ್ನ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉದಯಭಾನು ಚಿಬ್ ಅವರನ್ನು ಬೆಂಬಲಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ದೆಹಲಿಯಲ್ಲಿ ರೈಲು ರೋಕೋ ಆಂದೋಲನ ನಡೆಸಿದರು.
ಶಿವಾಜಿ ಸೇತುವೆ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಕೆಲವರು ಹಳಿಗಳ ಮೇಲೆ ಕುಳಿತು ನವದೆಹಲಿಗೆ ತೆರಳುತ್ತಿದ್ದ ಮೆಮು ರೈಲನ್ನು ತಡೆದರೆ, ಇನ್ನೂ ಕೆಲವರು ರೈಲಿನ ಮುಂಭಾಗಕ್ಕೆ ಹತ್ತಿ ಪ್ರತಿಭಟನೆ ಮುಂದುವರಿಸಿದರು. ಘಟನೆಯಿಂದ ಕೆಲಕಾಲ ರೈಲು ಸಂಚಾರ ವ್ಯತ್ಯಯಗೊಂಡಿತು.
ಪ್ರತಿಭಟನೆ ಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಭಾರತೀಯ ಯುವ ಕಾಂಗ್ರೆಸ್, “ಅಧ್ಯಕ್ಷ ಉದಯಭಾನು ಚಿಬ್ ಹಾಗೂ ಇತರರ ಬಂಧನವನ್ನು ವಿರೋಧಿಸಿ ರೈಲು ರೋಕೋ ಚಳುವಳಿ ನಡೆಸಲಾಗಿದೆ. ಪ್ರಜಾಪ್ರಭುತ್ವದ ಧ್ವನಿಗಳನ್ನು ಹತ್ತಿಕ್ಕಲು ಮಾಡಿದ ಯಾವುದೇ ಪ್ರಯತ್ನಕ್ಕೂ ನಮ್ಮ ಪ್ರತಿರೋಧ ಇನ್ನಷ್ಟು ಬಲವಾಗುತ್ತದೆ” ಎಂದು ಹೇಳಿದೆ. ಬಂಧಿತರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa