ಫೆ.27ಕ್ಕೆ ಮೂರನೇ ತ್ರೈಮಾಸಿಕ ಅಂಕಿ-ಅಂಶ ಬಿಡುಗಡೆ
ನವದೆಹಲಿ, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : 2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್) ಅವಧಿಯ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ) ಅಂಕಿ-ಅಂಶಗಳನ್ನು ಫೆಬ್ರವರಿ 27ರಂದು ಪ್ರಕಟಿಸಲಾಗುತ್ತದೆ. ಈ ಬಾರಿ ಜಿಡಿಪಿ ಲೆಕ್ಕಾಚಾರವನ್ನು ಹೊಸ ಆಧಾರ ವರ್ಷದ ಮೇಲೆ ಪ್ರಕಟಿಸಲು ಕೇಂ
GDP


ನವದೆಹಲಿ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : 2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್) ಅವಧಿಯ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ) ಅಂಕಿ-ಅಂಶಗಳನ್ನು ಫೆಬ್ರವರಿ 27ರಂದು ಪ್ರಕಟಿಸಲಾಗುತ್ತದೆ. ಈ ಬಾರಿ ಜಿಡಿಪಿ ಲೆಕ್ಕಾಚಾರವನ್ನು ಹೊಸ ಆಧಾರ ವರ್ಷದ ಮೇಲೆ ಪ್ರಕಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಧಿಕೃತ ಮೂಲಗಳ ಪ್ರಕಾರ, ಫೆ.27ರಿಂದ ಜಿಡಿಪಿ ಗಣನೆಗೆ ಹೊಸ ವಿಧಾನ ಜಾರಿಯಾಗಲಿದೆ. ಇದುವರೆಗೆ 2011-12 ಆಧಾರ ವರ್ಷವನ್ನು ಬಳಸಲಾಗುತ್ತಿತ್ತು. ಇದೀಗ ಅದನ್ನು 2022-23ಕ್ಕೆ ಬದಲಿಸಲಾಗಿದೆ. ಹೊಸ ಆಧಾರದಂತೆ ಪ್ರಕಟವಾಗುವ ಜಿಡಿಪಿ ಅಂಕಿ-ಅಂಶಗಳಲ್ಲಿ ಹೆಚ್ಚು ನಿಖರತೆ ಸಾಧಿಸಲು ‘ಡಬಲ್ ಡಿಫ್ಲೇಷನ್’ ವಿಧಾನ ಮತ್ತು 500-600 ವಸ್ತುಗಳನ್ನು ಒಳಗೊಂಡ ವಿಶ್ಲೇಷಣೆಯನ್ನು ಬಳಸಲಾಗುತ್ತದೆ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ 2025-26ನೇ ಹಣಕಾಸು ವರ್ಷದ ಎರಡನೇ ಮುಂಗಡ ಅಂದಾಜುಗಳನ್ನು ಸಹ ಇದೇ ದಿನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೊಸ ಆಧಾರ ವರ್ಷದ ಪ್ರಕಾರ ಮೊದಲ ಹಾಗೂ ಎರಡನೇ ತ್ರೈಮಾಸಿಕದ ಹಳೆಯ ಅಂಕಿ-ಅಂಶಗಳಲ್ಲಿಯೂ ಪರಿಷ್ಕರಣೆ ಆಗಬಹುದು.

ಕಳೆದ ತಿಂಗಳು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜಿನ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ದೇಶದ ವಾಸ್ತವಿಕ ಜಿಡಿಪಿ ವೃದ್ಧಿದರ 7.4 ಶೇಕಡಾ ಇರಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುನ್ನ 2024-25ನೇ ಹಣಕಾಸು ವರ್ಷದಲ್ಲಿ ಜಿಡಿಪಿ ವೃದ್ಧಿದರ 6.5 ಶೇಕಡಾ ದಾಖಲಾಗಿತ್ತು.

ಇದಲ್ಲದೆ, ಎಸ್ಬಿಐ ತನ್ನ ಇತ್ತೀಚಿನ ವರದಿಯಲ್ಲಿ 2026-27ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ವಾಸ್ತವಿಕ ಜಿಡಿಪಿ ವೃದ್ಧಿದರ ಸುಮಾರು 8.1 ಶೇಕಡಾ ಇರಬಹುದು ಎಂದು ಅಂದಾಜಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande