




ಬಳ್ಳಾರಿ, 23 ಫೆಬ್ರವರಿ (ಹಿ.ಸ.)
ಆ್ಯಂಕರ್:
ಬಳ್ಳಾರಿಯ ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಲಭಿಸಿದೆ.
2026ರ ಫೆಬ್ರವರಿ 16 ರಿಂದ 21 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆದ ವಲ್ರ್ಡ್ ಪ್ಯಾರಾ ಈಜು ಸ್ಪರ್ಧೆ ಚಾಂಪಿಯನ್ ಶಿಪ್ ನಲ್ಲಿ
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ
ಬಳ್ಳಾರಿಯ ಗೋಪಿಚಂದ್ ಅವರು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಅವರು 4*100 ಮೀಟರ್ ಮಿಡ್ ರಿಲೇಯಲ್ಲಿ ಎರಡನೇ ಸ್ಥಾನ ಪಡೆದು, ಅಂತಾರಾಷ್ಟ್ರೀಯ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬಳ್ಳಾರಿಗೆ ಜಿಲ್ಲೆಯ ಪ್ಯಾರಾ ಸ್ವಿಮ್ಮರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೊದಲನೇಯ ಪದಕವಾಗಿದೆ.
ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ತರಬೇತುದಾರರಾದ ರಜನಿ ಲಕ್ಕಾ ಮತ್ತು ಶರತ್ ಗಾಯಕ್ವಾಡ್ ಅವರು ತರಬೇತಿ ನೀಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್