ಕಿಶ್ತ್ವಾರ್ ಚತ್ರೂದಲ್ಲಿ 326 ದಿನಗಳ ಜಂಟಿ ಕಾರ್ಯಾಚರಣೆ ; 7 ಉಗ್ರರ ಹತ್ಯೆ
ಜಮ್ಮು, 23 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕಿಶ್ತ್ವಾರ್ ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಭದ್ರತಾ ಪಡೆಗಳು 326 ದಿನಗಳ ಕಾಲ ನಿರಂತರವಾಗಿ ನಡೆಸಿದ ದೀರ್ಘಕಾಲೀನ ಜಂಟಿ ಕಾರ್ಯಾಚರಣೆಯಲ್ಲಿ ಏಳು ಭಯೋತ್ಪಾದಕರು ಹತರಾಗಿದ್ದಾರೆ. ಸೇನೆಯ ವೈಟ್ ನೈಟ್ ಕಾರ್ಪ್ಸ್ ಈ ಕಾರ್ಯಾಚರಣೆಯನ್ನು “ವೀರೋಚಿತ ಪರಿಶ್ರಮ” ಎ
Terror


ಜಮ್ಮು, 23 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕಿಶ್ತ್ವಾರ್ ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಭದ್ರತಾ ಪಡೆಗಳು 326 ದಿನಗಳ ಕಾಲ ನಿರಂತರವಾಗಿ ನಡೆಸಿದ ದೀರ್ಘಕಾಲೀನ ಜಂಟಿ ಕಾರ್ಯಾಚರಣೆಯಲ್ಲಿ ಏಳು ಭಯೋತ್ಪಾದಕರು ಹತರಾಗಿದ್ದಾರೆ. ಸೇನೆಯ ವೈಟ್ ನೈಟ್ ಕಾರ್ಪ್ಸ್ ಈ ಕಾರ್ಯಾಚರಣೆಯನ್ನು “ವೀರೋಚಿತ ಪರಿಶ್ರಮ” ಎಂದು ವರ್ಣಿಸಿದೆ.

ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಕಠಿಣ ಪರ್ವತ ಪ್ರದೇಶ, ದುರ್ಗಮ ಕಣಿವೆಗಳು ಹಾಗೂ ಹೆಪ್ಪುಗಟ್ಟುವ ಶೀತ ಹವಾಮಾನ ನಡುವೆಯೂ ಪಡೆಗಳು ದಣಿವರಿಯದ ಶೋಧ ಮತ್ತು ಕೂಬಿಂಗ್ ಕಾರ್ಯಾಚರಣೆ ನಡೆಸಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಜೊತೆ ಸಮನ್ವಯ ಸಾಧಿಸಿ ಈ ಆಪರೇಷನ್ ಕೈಗೊಳ್ಳಲಾಗಿತ್ತು. ನಾಗರಿಕ ಮತ್ತು ಸೈನಿಕ ಗುಪ್ತಚರ ಸಂಸ್ಥೆಗಳ ಸುಸಂಘಟಿತ ಮಾಹಿತಿ ಜಾಲವೂ ಕಾರ್ಯಾಚರಣೆಗೆ ಮಹತ್ವದ ಬೆಂಬಲ ನೀಡಿದೆ.

ಭದ್ರತಾ ಪಡೆಗಳು ಹಲವು ಬಾರಿ ಎನ್ಕೌಂಟರ್ಗಳನ್ನು ಎದುರಿಸಿದರೂ ಉಗ್ರರನ್ನು ಹಿಂಬಾಲಿಸಿ ಅಂತಿಮವಾಗಿ ಎಲ್ಲ ಏಳು ಮಂದಿಯನ್ನೂ ನಿರ್ಮೂಲನೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಎಫ್ಪಿವಿ ಡ್ರೋನ್ಗಳು, ಉಪಗ್ರಹ ಚಿತ್ರಣ, ಆರ್ಪಿಎಗಳು, ಯುಎವಿಗಳು ಮತ್ತು ಸುಧಾರಿತ ಸಂವಹನ ವ್ಯವಸ್ಥೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ಸೇನೆ ತಿಳಿಸಿದೆ.

ಸೇನೆ ತಿಳಿಸಿದಂತೆ, ಸೈಫುಲ್ಲಾ ಮತ್ತು ಅವನ ಸಹಚರರ ನಿರ್ನಾಮವು ಈ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಉಗ್ರ ಜಾಲಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಯಶಸ್ಸು ಭದ್ರತಾ ಪಡೆಗಳ ಧೈರ್ಯ, ಶೌರ್ಯ ಮತ್ತು ಗುಪ್ತಚರ ಘಟಕಗಳ ಸಮನ್ವಯದ ಫಲವಾಗಿದೆ ಎಂದು ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

ಈ ದೀರ್ಘಕಾಲೀನ ಆಪರೇಷನ್ ಕಿಶ್ತ್ವಾರ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande