ನಾಯಕರು ಜನರ ನಡುವೆ ಹೋಗಿ ಕೆಲಸ ಮಾಡುವಂತೆ ಬಿಜೆಪಿ ಅಧ್ಯಕ್ಷ ನವೀನ್ ಕರೆ
ಗಾಂಧಿನಗರ, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗುಜರಾತ್ ಗೆ ಮೂರು ದಿನಗಳ ಭೇಟಿ ನೀಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪಕ್ಷದ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ಸಂಘಟನೆ ಬಲಪಡಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದಾರೆ. ಗಾಂಧಿನಗರದಲ್ಲಿರುವ ಪಕ
Nitin


ಗಾಂಧಿನಗರ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗುಜರಾತ್ ಗೆ ಮೂರು ದಿನಗಳ ಭೇಟಿ ನೀಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪಕ್ಷದ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ಸಂಘಟನೆ ಬಲಪಡಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದಾರೆ.

ಗಾಂಧಿನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿ “ಕಮಲಂ” ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯವು ಶಾರ್ಟ್ಕಟ್ ಅಲ್ಲ, ಅದು ಮ್ಯಾರಥಾನ್ನಂತೆ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ ಎಂದು ಹೇಳಿದ್ದಾರೆ.

“ಕೇವಲ ಹುದ್ದೆಗಾಗಿ ಪಕ್ಷಕ್ಕೆ ಸೇರಬೇಡಿ. ಹುದ್ದೆ ಇರಲಿ ಇಲ್ಲದಿರಲಿ, ಸಂಘಟನೆಗಾಗಿ ನಿರಂತರವಾಗಿ ಕೆಲಸ ಮಾಡಬೇಕು. ನಿಮ್ಮನ್ನು ಪಕ್ಷ ಎಂದು ಪರಿಗಣಿಸಿ ಜಿಲ್ಲೆಯಲ್ಲಿ ನಿಮ್ಮದೇ ಗುಂಪುಗಳನ್ನು ನಿರ್ಮಿಸುವುದು ಒಳ್ಳೆಯ ಸಂಸ್ಕೃತಿ ಅಲ್ಲ,” ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯ ಮಟ್ಟದ ಪದಾಧಿಕಾರಿಗಳು, ನಗರ ಘಟಕದ ಅಧ್ಯಕ್ಷರು ಹಾಗೂ ಇತರ ಪ್ರಮುಖ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಕೆಲ ಉಸ್ತುವಾರಿಗಳ ಕಾರ್ಯಶೈಲಿಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

“ಜಿಲ್ಲೆಗೆ ಭೇಟಿ ನೀಡಿ ನ್ಯಾಯ ಮತ್ತು ಶಿಸ್ತು ಬಗ್ಗೆ ಮಾತನಾಡುವ ಕೆಲ ನಾಯಕರು, ನಂತರ ತಮ್ಮದೇ ಆವರಣ ನಿರ್ಮಿಸಲು ಮುಂದಾಗುತ್ತಾರೆ. ಇದು ಸಂಘಟನೆಯ ತತ್ವಗಳಿಗೆ ವಿರುದ್ಧ,” ಎಂದು ಹೇಳಿದರು.

ಬಿಜೆಪಿ ಪ್ರತಿನಿಧಿಗಳು ಸಮಾಜದ ವಿವಿಧ ವರ್ಗಗಳೊಂದಿಗೆ ಬಲವಾದ ಸಂಪರ್ಕ ಹೊಂದಿರಬೇಕು ಎಂದು ಸೂಚಿಸಿದ ಅವರು, “ನೀವು ನಿಮ್ಮ ಹುದ್ದೆಗಿಂತ ಎರಡು ಹೆಜ್ಜೆ ಕೆಳಗೆ ಇಳಿದು ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳು ಸಿಗುತ್ತವೆ” ಎಂದು ಮಾರ್ಗದರ್ಶನ ನೀಡಿದರು. ಸಕಾರಾತ್ಮಕ ಸಾರ್ವಜನಿಕ ಇಮೇಜ್ ಕಾಪಾಡಿಕೊಳ್ಳುವುದಕ್ಕೂ ಅವರು ಒತ್ತಾಯಿಸಿದರು.

ಶಾಸಕರು ಮತ್ತು ಸಂಸದರನ್ನುದ್ದೇಶಿಸಿ ಮಾತನಾಡಿದ ನವೀನ್, “ಮನೆಯಲ್ಲಿ ಕೂತು ಕಚೇರಿ ನಡೆಸಬೇಡಿ. ನೆಲಮಟ್ಟದಲ್ಲಿ ಜನರೊಂದಿಗೆ ನೇರ ಸಂಪರ್ಕ ಬೆಳೆಸಿ, ಸಾರ್ವಜನಿಕ ಸಂಪರ್ಕವನ್ನು ಬಲಪಡಿಸಿ” ಎಂದು ಸ್ಪಷ್ಟ ಸೂಚನೆ ನೀಡಿದರು.

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು. ಬೂತ್ ಮಟ್ಟದ ಡೇಟಾ ನಿರ್ವಹಣೆಯನ್ನು ಬಲಪಡಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಾಯಕರ ನಿಷ್ಕ್ರಿಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ನಡೆದ ಎಐ ಶೃಂಗಸಭೆ ಕುರಿತಂತೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ ವಿರೋಧಕ್ಕೆ ಎಷ್ಟು ನಾಯಕರು ಪ್ರತಿಕ್ರಿಯಿಸಿದ್ದಾರೆ ಎಂದು ಪ್ರಶ್ನಿಸಿದರು. ಕೆಲವೇ ಮಂದಿ ಕೈ ಎತ್ತಿದಾಗ, “ಜವಾಬ್ದಾರಿಯುತ ನಾಯಕರು ತಾವೇ ಸಕ್ರಿಯರಾಗಿರದಿದ್ದರೆ, ಸಂಘಟನೆ ಹೇಗೆ ಸಕ್ರಿಯವಾಗಲಿದೆ?” ಎಂದು ಪ್ರಶ್ನಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande