ಸವಾಲಿನ ಪರಿಸ್ಥಿತಿಯಲ್ಲಿ ಕರ್ತವ್ಯ ನಿಷ್ಠೆ ಅಚಲ : ಸಿಐಎಸ್ಎಫ್
ನವದೆಹಲಿ, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ತೀವ್ರ ಹಿಮಪಾತ, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ದುರ್ಗಮ ಪರ್ವತ ಪ್ರದೇಶಗಳಂತಹ ಸವಾಲಿನ ಪರಿಸ್ಥಿತಿಗಳಲ್ಲಿಯೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ತನ್ನ ಕರ್ತವ್ಯನಿಷ್ಠೆಯನ್ನು ಅಚಲವಾಗಿ ಮುಂದುವರಿಸುತ್ತಿದೆ ಎಂದು ಸಿಐಎಸ್ಎಫ್ ತನ್ನ ಅಧಿಕೃತ ಎಕ್ಸ ಖಾ
Cisf


ನವದೆಹಲಿ, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ತೀವ್ರ ಹಿಮಪಾತ, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ದುರ್ಗಮ ಪರ್ವತ ಪ್ರದೇಶಗಳಂತಹ ಸವಾಲಿನ ಪರಿಸ್ಥಿತಿಗಳಲ್ಲಿಯೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ತನ್ನ ಕರ್ತವ್ಯನಿಷ್ಠೆಯನ್ನು ಅಚಲವಾಗಿ ಮುಂದುವರಿಸುತ್ತಿದೆ ಎಂದು ಸಿಐಎಸ್ಎಫ್ ತನ್ನ ಅಧಿಕೃತ ಎಕ್ಸ ಖಾತೆಯಲ್ಲಿ ತಿಳಿಸಿದೆ.

ಸಿಐಎಸ್ಎಫ್ ಸ್ಥಾಪನಾ ದಿನದ ಅಂಗವಾಗಿ ಮಾಹಿತಿ ಹಂಚಿಕೊಂಡಿದ್ದು, ಪ್ರಮುಖ ಕೈಗಾರಿಕಾ ಸ್ಥಾಪನೆಗಳು, ವಿಮಾನ ನಿಲ್ದಾಣಗಳು, ಅಣು ವಿದ್ಯುತ್ ಕೇಂದ್ರಗಳು ಮತ್ತು ತಂತ್ರಾತ್ಮಕ ಮೂಲಸೌಕರ್ಯಗಳ ರಕ್ಷಣೆಗೆ ನಿಯೋಜಿಸಲ್ಪಟ್ಟಿರುವ ಸಿಐಎಸ್‌ಎಫ್ ಸಿಬ್ಬಂದಿ 24/7 ಕಣ್ಗಾವಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರೀ ಹಿಮಪಾತದಿಂದ ರಸ್ತೆ ಸಂಪರ್ಕ ಕಡಿತವಾದರೂ, ಸಂಚಾರ ಅಸಾಧ್ಯವಾದರೂ, ಸಿಬ್ಬಂದಿ ತಮ್ಮ ಕರ್ತವ್ಯ ತೊರೆಯದೆ ನಿರಂತರ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅತ್ಯಂತ ಕಠಿಣ ಹವಾಮಾನ, ಆಮ್ಲಜನಕ ಕೊರತೆ ಮತ್ತು ಭೌಗೋಳಿಕ ಅಡೆತಡೆಗಳ ನಡುವೆಯೂ ಅವರು ತೋರಿಸುವ ವೃತ್ತಿಪರತೆ, ಸಹಿಷ್ಣುತೆ ಮತ್ತು ಅಚಲ ಬದ್ಧತೆ ದೇಶದ ಭದ್ರತಾ ವ್ಯವಸ್ಥೆಯ ಬಲವನ್ನು ಪ್ರತಿಬಿಂಬಿಸುತ್ತದೆ. ಇಂತಹ ಸವಾಲಿನ ಪರಿಸ್ಥಿತಿಗಳಲ್ಲಿಯೂ ಕಾರ್ಯಾಚರಣೆಯ ನಿರಂತರತೆ ಕಾಪಾಡುವುದು, ಯಾವುದೇ ಭದ್ರತಾ ದುರ್ಬಲತೆ ಉಂಟಾಗದಂತೆ ನೋಡಿಕೊಳ್ಳುವುದು ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande