ಭಾರತ–ಬ್ರೆಜಿಲ್ ನಡುವೆ 10 ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಂದ
ನವದೆಹಲಿ, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ನಡುವಿನ ಮಾತುಕತೆಯ ಬಳಿಕ ಭಾರತ–ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕು ಸಿಕ್ಕಿದೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 20
Mou


ನವದೆಹಲಿ, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ನಡುವಿನ ಮಾತುಕತೆಯ ಬಳಿಕ ಭಾರತ–ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕು ಸಿಕ್ಕಿದೆ.

ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 20 ಬಿಲಿಯನ್ ಅಮೆರಿಕನ್ ಡಾಲರ್ಗಿಂತ ಹೆಚ್ಚು ಮಾಡುವ ಮಹತ್ವಾಕಾಂಕ್ಷಿ ಗುರಿಯನ್ನು ಎರಡೂ ದೇಶಗಳು ನಿಗದಿಪಡಿಸಿವೆ.

10 ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ

ರಕ್ಷಣಾ ಮತ್ತು ಭದ್ರತೆ, ಇಂಧನ ಪರಿವರ್ತನೆ, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ , ಸೆಮಿಕಂಡಕ್ಟರ್, ಪ್ರಮುಖ ಮತ್ತು ಅಪರೂಪದ ಖನಿಜಗಳು, ಕೃಷಿ, ಆರೋಗ್ಯ, ಎಂಎಸ್ಎಂಇ ಮತ್ತು ಕೈಗಾರಿಕಾ ಸಹಭಾಗಿತ್ವ ಸೇರಿದಂತೆ 10 ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಒಪ್ಪಂದವಾಗಿದೆ. ಸ್ಟೀಲ್ ಉತ್ಪಾದನೆಗೆ ಅಗತ್ಯವಾದ ಖನಿಜಗಳ ಸರಬರಾಜು ಸರಪಳಿಯನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.

ತಂತ್ರಜ್ಞಾನ ಮತ್ತು ಡಿಜಿಟಲ್ ಸಹಭಾಗಿತ್ವ

ಎಐ, ಸೂಪರ್ ಕಂಪ್ಯೂಟಿಂಗ್, ಬ್ಲಾಕ್ಚೇನ್ ಮತ್ತು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳಲ್ಲಿ ಸಂಯುಕ್ತ ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಬ್ರೆಜಿಲ್ನಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೂ ಚರ್ಚೆ ನಡೆದಿದೆ.

ಇಂಧನ ಮತ್ತು ಹಸಿರು ಅಭಿವೃದ್ಧಿ

ಹೈಡ್ರೋಕಾರ್ಬನ್ ಜೊತೆಗೆ ನವೀಕರಿಸಬಹುದಾದ ಇಂಧನ, ಎಥನಾಲ್ ಮಿಶ್ರಣ ಮತ್ತು ಸಸ್ಟೇನಬಲ್ ಏವಿಯೇಷನ್ ಇಂಧನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಹಸಿರು ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಸಂಯುಕ್ತ ಕ್ರಮಕ್ಕೆ ಬದ್ಧತೆ ವ್ಯಕ್ತವಾಗಿದೆ.

ಕೃಷಿ ಮತ್ತು ಆರೋಗ್ಯ

ಹವಾಮಾನ ಸಹಿಷ್ಣು ಕೃಷಿ (ಕ್ಲೈಮೇಟ್ ರೆಸಿಲಿಯಂಟ್ ಅಗ್ರಿಕಲ್ಚರ್), ಪ್ರಿಸಿಷನ್ ಫಾರ್ಮಿಂಗ್ ಮತ್ತು ಜೈವಿಕ ಗೊಬ್ಬರ ಬಳಕೆ ಕುರಿತು ಸಹಕಾರ ಹೆಚ್ಚಿಸಲು ಒಪ್ಪಂದವಾಗಿದೆ. ಆರೋಗ್ಯ ಮತ್ತು ಔಷಧೀಯ ಕ್ಷೇತ್ರದಲ್ಲಿ ಭಾರತದಿಂದ ಬ್ರೆಜಿಲ್ಗೆ ಗುಣಮಟ್ಟದ, ಕಡಿಮೆ ದರದ ಔಷಧಿಗಳ ಪೂರೈಕೆ ವಿಸ್ತರಿಸಲಾಗುತ್ತದೆ.

ಜಾಗತಿಕ ವಿಷಯಗಳಲ್ಲಿ ಒಗ್ಗಟ್ಟು

ಭಯೋತ್ಪಾದನೆ ವಿರುದ್ಧ ಕಠಿಣ ಜಾಗತಿಕ ಕ್ರಮ ಅಗತ್ಯವೆಂದು ಇಬ್ಬರೂ ನಾಯಕರು ಒತ್ತಿಹೇಳಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತ್ವರಿತ ಸುಧಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಸಮಾನ ಮತ್ತು ನ್ಯಾಯಸಮ್ಮತ ವ್ಯವಸ್ಥೆಗೆ ಭಾರತ–ಬ್ರೆಜಿಲ್ ಬದ್ಧವಾಗಿವೆ.

ಬ್ರೆಜಿಲ್ ಭಾರತೀಯ ವೀಸಾ ಹೊಂದಿರುವವರಿಗೆ ವ್ಯಾಪಾರ ವೀಸಾ ಅವಧಿಯನ್ನು 10 ವರ್ಷಗಳವರೆಗೆ ವಿಸ್ತರಿಸುವ ಘೋಷಣೆ ಮಾಡಿದೆ. ಈ ಭೇಟಿ ಭಾರತ–ಬ್ರೆಜಿಲ್ 20 ವರ್ಷದ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಉಭಯ ರಾಷ್ಟ್ರಗಳ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande