
ಅಯೋಧ್ಯೆ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತ ಪ್ರವಾಸದಲ್ಲಿರುವ ಗಯಾನಾ ಉಪಾಧ್ಯಕ್ಷ ಡಾ. ಭರತ್ ಜಗದೇವ್ ಅವರು ಶನಿವಾರ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾಗೆ ವಿಶೇಷ ಪೂಜೆ ಸಲ್ಲಿಸಿದರು.
ದರ್ಶನದ ಬಳಿಕ ಅವರು ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ಶ್ರೀರಾಮ ಜನ್ಮಭೂಮಿ ದೇವಸ್ಥಾನ ಸಂಕೀರ್ಣವನ್ನು ಸುತ್ತಿ ವೀಕ್ಷಿಸಿದರು. ದೇವಾಲಯ ನಿರ್ಮಾಣದ ಭವ್ಯತೆ ಹಾಗೂ ದೈವಿಕ ವಾತಾವರಣವನ್ನು ಸಮೀಪದಿಂದ ಅನುಭವಿಸಿದ ಅವರು, ನಿರ್ಮಾಣ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ದೀರ್ಘಕಾಲದ ಹೋರಾಟ, ಚಳುವಳಿ, ನ್ಯಾಯಾಲಯದ ವಿಚಾರಣೆಗಳು ಮತ್ತು ದೇವಸ್ಥಾನ ನಿರ್ಮಾಣದ ಹಂತಗಳ ಕುರಿತು ಪ್ರಧಾನ ಕಾರ್ಯದರ್ಶಿ ವಿವರಿಸಿದರು.
ಭಾರತೀಯ ಮೂಲದ ಡಾ. ಜಗದೇವ್ ಅವರ ಪೂರ್ವಜರು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಪೂರೆ ಠಾಕುರೈನ್ ಗ್ರಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರು ಭಾರತ ಪ್ರವಾಸದಲ್ಲಿದ್ದು, ನವದೆಹಲಿಯಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಪೂಜೆ ಹಾಗೂ ದರ್ಶನದ ಬಳಿಕ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತೆರಳಿ, ಅಲ್ಲಿಂದ ಗಯಾನಾಕ್ಕೆ ಪ್ರಯಾಣ ಬೆಳೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa