ಸಂಸದ ರಿಕಿ ಆಂಡ್ರ್ಯೂ ಜೆ. ಸಿಂಗ್ಕೊ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ
ನವದೆಹಲಿ, 20 ಫೆಬ್ರವರಿ (ಹಿ.ಸ.) : ಆ್ಯಂಕರ್ : ಶಿಲ್ಲಾಂಗ್ ಲೋಕ ಸಭಾ ಕ್ಷೇತ್ರದ ಸಂಸದ ರಿಕಿ ಆಂಡ್ರ್ಯೂ ಜೆ. ಸಿಂಗ್ಕೊ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಶೋಕ ಸಂದೇಶದಲ್ಲಿ, ಡಾ. ಸಿಂಗ
syngkon


ನವದೆಹಲಿ, 20 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಶಿಲ್ಲಾಂಗ್ ಲೋಕ ಸಭಾ ಕ್ಷೇತ್ರದ ಸಂಸದ ರಿಕಿ ಆಂಡ್ರ್ಯೂ ಜೆ. ಸಿಂಗ್ಕೊ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಶೋಕ ಸಂದೇಶದಲ್ಲಿ, ಡಾ. ಸಿಂಗ್ಕೊ ಅವರ ನಿಧನದ ಸುದ್ದಿ ದುಃಖಕರವಾಗಿದೆ ಎಂದು ಹೇಳಿ, ಅವರು ಮೇಘಾಲಯದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಸಮರ್ಪಿತ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು. ದಿವಂಗತ ಸಂಸದರ ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ರಾಷ್ಟ್ರಪತಿಗಳು ಆಳವಾದ ಸಂತಾಪ ಸೂಚಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿ, ಡಾ. ಸಿಂಗ್ಕೊ ಅವರು ಮೇಘಾಲಯದ ಜನತೆಗೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು. ಈ ದುಃಖದ ಸಂದರ್ಭದಲ್ಲಿ ಕುಟುಂಬದವರು, ಸ್ನೇಹಿತರು ಹಾಗೂ ಬೆಂಬಲಿಗರಿಗೆ ಧೈರ್ಯ ಕೋರಿದ ಅವರು, ಅಗಲಿದ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಗುರುವಾರ ಸಂಜೆ ಶಿಲ್ಲಾಂಗ್‌ನಲ್ಲಿ ನಡೆದ ಸೌಹಾರ್ದಯುತ ಪಂದ್ಯದ ವೇಳೆ ಫುಟ್ಸಲ್ ಆಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರೆಂದು ವರದಿಯಾಗಿದೆ. ಘಟನೆ ಬಳಿಕ ಆಸ್ಪತ್ರೆಗೆ ದಾಖಲಿಸಿದರು ‌ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande