ಭಾರತ ‘ಪ್ಯಾಕ್ಸ್ ಸಿಲಿಕಾ’ ಕಾರ್ಯತಂತ್ರದ ಮೈತ್ರಿಕೂಟಕ್ಕೆ ಸೇರ್ಪಡೆ
ನವದೆಹಲಿ, 20 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅಮೆರಿಕ ನೇತೃತ್ವದ ಕಾರ್ಯತಂತ್ರದ ಮೈತ್ರಿಕೂಟ ‘ಪ್ಯಾಕ್ಸ್ ಸಿಲಿಕಾ’ಗೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ. ನಿರ್ಣಾಯಕ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಬಲವಾದ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಒಪ್ಪಂದ ಕೈಗೊಳ್ಳಲ
Pax


ನವದೆಹಲಿ, 20 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಮೆರಿಕ ನೇತೃತ್ವದ ಕಾರ್ಯತಂತ್ರದ ಮೈತ್ರಿಕೂಟ ‘ಪ್ಯಾಕ್ಸ್ ಸಿಲಿಕಾ’ಗೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ. ನಿರ್ಣಾಯಕ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಬಲವಾದ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಒಪ್ಪಂದ ಕೈಗೊಳ್ಳಲಾಗಿದೆ. ನವದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಭಾರತ್ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ ಹಾಗೂ ಅಮೆರಿಕದ ಆರ್ಥಿಕ ವ್ಯವಹಾರಗಳ ಅಧೀನ ಕಾರ್ಯದರ್ಶಿ ಜಾಕೋಬ್ ಹೆಲ್ಬರ್ಗ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾಕೋಬ್ ಹೆಲ್ಬರ್ಗ್, “ಪ್ಯಾಕ್ಸ್ ಸಿಲಿಕಾ ಭವಿಷ್ಯವನ್ನು ನಿರ್ಮಿಸುವ ರಾಷ್ಟ್ರಗಳ ಮೈತ್ರಿಯಾಗಿದೆ. ಮುಕ್ತ ಸಮಾಜಗಳು ಒಂದಾಗುವಾಗ ಹೊಸ ಸಾಧ್ಯತೆಗಳು ಮೂಡುತ್ತವೆ ಎಂಬುದಕ್ಕೆ ಇದು ಘೋಷಣೆ,” ಎಂದು ಹೇಳಿದರು.

ಪ್ಯಾಕ್ಸ್ ಸಿಲಿಕಾ ಒಪ್ಪಂದವು ಸೆಮಿಕಂಡಕ್ಟರ್ ಪೂರೈಕೆ ಸರಪಳಿ, ಉತ್ಪಾದನೆ ಹಾಗೂ ಚಿಪ್ ವಿನ್ಯಾಸ ಕ್ಷೇತ್ರಗಳಿಗೆ ನಿರ್ಣಾಯಕವಾಗಲಿದೆ. ದೇಶದಲ್ಲಿ ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಸ್ಥಾಪಿಸಲು ಇದು ನೆರವಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಒಪ್ಪಂದವು ಭಾರತ–ಅಮೆರಿಕ ತಂತ್ರಜ್ಞಾನ ಸಹಯೋಗವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande