
ಇಂಫಾಲ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂಫಾಲ ಪಶ್ಚಿಮ ಹಾಗೂ ಟೆಂಗ್ನೌಪಾಲ್ ಜಿಲ್ಲೆಗಳ ನಾನಾ ಪ್ರದೇಶಗಳಲ್ಲಿ ಎಕೆ–47 ರೈಫಲ್, ಪಿಸ್ತೂಲ್‌ಗಳು, ಗ್ರೆನೇಡ್‌ಗಳು, ಐಇಡಿ ಹಾಗೂ ಜೀವಂತ ಕಾರ್ಟ್ರಿಡ್ಜ್‌ಗಳನ್ನು ಪತ್ತೆ ಹಚ್ಚಲಾಗಿದೆ. ಕೆಲವು ಸ್ಫೋಟಕಗಳನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಗಿದೆ.
ಇದರ ಜೊತೆಗೆ, ಕೆಸಿಪಿ (ಪಿಡಬ್ಲ್ಯೂಜಿ), ಯುಎನ್‌ಎಲ್‌ಎಫ್ (ಕೊಯಿರೆಂಗ್) ಹಾಗೂ ಆರ್‌ಪಿಎಫ್/ಪಿಎಲ್‌ಎ ಸಂಘಟನೆಗಳ ಕೇಡರ್‌ಗಳನ್ನು ಬಂಧಿಸಲಾಗಿದೆ.
ಇನ್ನೊಂದೆಡೆ, ಇಂಫಾಲ ಪಶ್ಚಿಮ ಜಿಲ್ಲೆಯ ಕೇಂದ್ರ ಕಾರಾಗೃಹದ ವಾರ್ಡನ್ ಒಬ್ಬರನ್ನು ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಸೌಲಭ್ಯ ಒದಗಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಕರಣಗಳ ಕುರಿತಾಗಿ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa