ಶಿವಾಜಿ ಜಯಂತಿ ; ಪ್ರಧಾನಿ ಗೌರವ ನಮನ
ನವದೆಹಲಿ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಶಿವಾಜಿ ಮಹಾರಾಜರನ್ನು ದಾರ್ಶನಿಕ ನಾಯಕ, ಅತ್ಯುತ್ತಮ ಆಡಳಿತಗಾರ, ನುರಿತ ತಂತ್ರಜ್ಞ ಹಾಗೂ ಸ್ವರಾಜ್ಯದ ಮಹಾನ್ ಪ್ರತಿಪಾದಕರಾಗಿ ಪ್ರಧಾನಿ ಸ್ಮರಿಸಿ
Pm


ನವದೆಹಲಿ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಶಿವಾಜಿ ಮಹಾರಾಜರನ್ನು ದಾರ್ಶನಿಕ ನಾಯಕ, ಅತ್ಯುತ್ತಮ ಆಡಳಿತಗಾರ, ನುರಿತ ತಂತ್ರಜ್ಞ ಹಾಗೂ ಸ್ವರಾಜ್ಯದ ಮಹಾನ್ ಪ್ರತಿಪಾದಕರಾಗಿ ಪ್ರಧಾನಿ ಸ್ಮರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಪ್ರಧಾನಿ, “ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದಂದು ಆ ದಾರ್ಶನಿಕ ನಾಯಕನಿಗೆ ನಮನ ಸಲ್ಲಿಸುತ್ತೇವೆ. ಅವರ ಧೈರ್ಯ ನಮಗೆ ಸ್ಫೂರ್ತಿ ನೀಡಲಿ, ಅವರ ಸುಶಾಸನ ನಮಗೆ ದಾರಿದೀಪವಾಗಲಿ ಮತ್ತು ನ್ಯಾಯ-ಸ್ವಾಭಿಮಾನದ ಅವರ ಮೌಲ್ಯಗಳು ನಮ್ಮ ಸಮಾಜವನ್ನು ಸಬಲಗೊಳಿಸಲಿ” ಎಂದು ಹೇಳಿದ್ದಾರೆ.

ಶಿವಾಜಿ ಮಹಾರಾಜರ ಧೈರ್ಯ ಮತ್ತು ದೇಶಭಕ್ತಿ ಇಂದಿಗೂ ದೇಶದ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಆಡಳಿತದ ತತ್ವಗಳು ಸಮಕಾಲೀನ ಆಡಳಿತ ವ್ಯವಸ್ಥೆಗೂ ಮಾರ್ಗದರ್ಶಕವಾಗಿವೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

ಪ್ರಜಾಕಲ್ಯಾಣಕ್ಕೆ ಸದಾ ಆದ್ಯತೆ ನೀಡಿದ ಶಿವಾಜಿ ಮಹಾರಾಜರು ತಮ್ಮ ಪ್ರಜೆಯ ರಕ್ಷಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳು ಭಾರತೀಯರ ಅನೇಕ ಪೀಳಿಗೆಗಳಿಗೆ ಶಾಶ್ವತ ಸ್ಫೂರ್ತಿಯ ಮೂಲವಾಗಿವೆ ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande