
ನವದೆಹಲಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಪರಮ ಪೂಜ್ಯ ‘ಗುರೂಜಿ’ ಎಂದೇ ಪ್ರಸಿದ್ಧರಾದ ಎಂ.ಎಸ್. ಗೋಲ್ವಾಲ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಗುರುಜಿಯವರು ಮಾತೃಭೂಮಿಗಾಗಿ ವೈಯಕ್ತಿಕ ಸೌಕರ್ಯಗಳನ್ನು ತ್ಯಾಗ ಮಾಡಿ ದೇಶಭಕ್ತಿ ಮತ್ತು ಸಾಂಸ್ಕೃತಿಕ ಹೆಮ್ಮೆಯ ಮರೆಯಲಾಗದ ಆದರ್ಶಗಳನ್ನು ಸ್ಥಾಪಿಸಿದರು ಎಂದು ಅಮಿತ್ ಶಾ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ತಿಳಿಸಿದ್ದಾರೆ. ಸಂಘದ ಮೂಲಕ ರಾಷ್ಟ್ರಕ್ಕೆ ಸಮರ್ಪಿತರಾದ ಯುವಕರ ಶಕ್ತಿಯನ್ನು ರಾಷ್ಟ್ರೀಯ ಶಕ್ತಿಯಾಗಿ ರೂಪಾಂತರಿಸಿದ ಮಹತ್ವದ ಪಾತ್ರವನ್ನು ಅವರು ಸ್ಮರಿಸಿದ್ದಾರೆ.
ಗುರೂಜಿಯವರ ಜೀವನವೇ ಪ್ರತಿಯೊಬ್ಬ ದೇಶಭಕ್ತನಿಗೂ ಶಾಶ್ವತ ಸ್ಫೂರ್ತಿ; ಅವರ ಆದರ್ಶಗಳು ಸಮಾಜದಲ್ಲಿ ರಾಷ್ಟ್ರಭಕ್ತಿ ಮತ್ತು ಸಂಘಟನೆಯ ಬಲವನ್ನು ವೃದ್ಧಿಸುವ ದಿಕ್ಕಿನಲ್ಲಿ ಸದಾ ಮಾರ್ಗದರ್ಶಕವಾಗಿವೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa