
ಲಕ್ನೋ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರು ಗುರುವಾರ ನಿರಾಲಾ ನಗರದ ಸರಸ್ವತಿ ಕುಂಜ್‌ನಲ್ಲಿ ಡಾ.ಮೋಹನ್ ಬಾಗವತ್ ಅವರನ್ನು ಸೌಜನ್ಯವಾಗಿ ಭೇಟಿ ಮಾಡಿದರು.
ಮೂರು ದಿನಗಳ ಲಕ್ನೋ ಭೇಟಿಯಲ್ಲಿರುವ ಆರ್‌ಎಸ್‌ಎಸ್ ಸರಸಂಘಚಾಲಕರು ಪ್ರಚಾರಕರೊಂದಿಗೆ ಸಭೆ ನಡೆಸಿದರು. ಇದಕ್ಕೂ ಮೊದಲು, ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ ಅವರು ಬುಧವಾರ ಡಾ. ಭಾಗವತ್ ಅವರನ್ನು ಭೇಟಿ ಮಾಡಿದ್ದರು.
ಫೆಬ್ರವರಿ 17ರಂದು ನಿರಾಲಾ ನಗರದ ಮಾಧವ್ ಸಭಾಂಗಣದಲ್ಲಿ ನಡೆದ ಕುಟುಂಬ ಸಭೆಯಲ್ಲಿ ಭಾಗವಹಿಸಿದ ಭಾಗವತ್, ಫೆಬ್ರವರಿ 18ರಂದು ಲಕ್ನೋ ವಿಶ್ವವಿದ್ಯಾಲಯದ ಮಾಳವೀಯ ಸಭಾಂಗಣದಲ್ಲಿ ಸಂಶೋಧಕರೊಂದಿಗೆ ಸಂವಾದ ನಡೆಸಿದರು. ಇದೇ ದಿನ ಸಂಜೆ ಗೋಮತಿ ನಗರದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa