ಕೇಂದ್ರ ಗೃಹ ಸಚಿವ ಅಮಿತ ಶಾ ಮೂರು ದಿನಗಳ ಅಸ್ಸಾಂ ಪ್ರವಾಸ
ಗುವಾಹಟಿ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಅಸ್ಸಾಂ ಭೇಟಿಗಾಗಿ ಇಂದು ರಾತ್ರಿ ಕ್ಯಾಚರ್ ಜಿಲ್ಲೆಯ ಪ್ರಧಾನ ಕಚೇರಿಯಾದ ಸಿಲ್ಚಾರ್‌ಗೆ ಆಗಮಿಸಲಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಫೆಬ್ರವರಿ
Amit sha


ಗುವಾಹಟಿ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಅಸ್ಸಾಂ ಭೇಟಿಗಾಗಿ ಇಂದು ರಾತ್ರಿ ಕ್ಯಾಚರ್ ಜಿಲ್ಲೆಯ ಪ್ರಧಾನ ಕಚೇರಿಯಾದ ಸಿಲ್ಚಾರ್‌ಗೆ ಆಗಮಿಸಲಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಫೆಬ್ರವರಿ 20ರಂದು ಅವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬಿಎಸ್‌ಎಫ್‌ನ ನೌತಾನ್‌ಪುರ ಗಡಿ ಹೊರಠಾಣೆಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಇದೇ ವೇಳೆ ‘ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ’ಗೆ ಚಾಲನೆ ನೀಡಲಿದ್ದು, ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಹಾಗೂ ಜೀವನೋಪಾಯವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಸಂಜೆ ಬರಾಕ್ ಕಣಿವೆಯಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ತ್ರಿಪುರಾದ ಅಗರ್ತಲಾಕ್ಕೆ ತೆರಳಿ, ನಂತರ ಗುವಾಹಟಿಗೆ ಹಿಂತಿರುಗಲಿದ್ದಾರೆ.

ಶನಿವಾರ ಗುವಾಹಟಿಯ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುವ ಸಿಆರ್‌ಪಿಎಫ್ ವಾರ್ಷಿಕ ಪರೇಡ್‌ನಲ್ಲಿ ಅವರು ಭಾಗವಹಿಸಲಿದ್ದಾರೆ. ಈಶಾನ್ಯದಲ್ಲಿ ಇದೇ ಮೊದಲ ಬಾರಿಗೆ ಪರೇಡ್ ನಡೆಯುತ್ತಿರುವುದು ವಿಶೇಷ. ಜೊತೆಗೆ ಸೋನಾಪುರದ ಕಸುಟೋಲಿಯಲ್ಲಿ 10ನೇ ಅಸ್ಸಾಂ ಪೊಲೀಸ್ ಬೆಟಾಲಿಯನ್‌ನ ಹೊಸ ಕ್ಯಾಂಪಸ್‌ಗೆ ಅಡಿಪಾಯ ಹಾಕಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande