ರಾಮಕೃಷ್ಣ ಪರಮಹಂಸರ ಜಯಂತಿ ; ಖರ್ಗೆ ನಮನ
ನವದೆಹಲಿ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ಒಂದೇ ಗುರಿಯನ್ನು ತಲುಪಲು ಹಲವು ಧರ್ಮಗಳು, ಹಲವು ಮಾರ್ಗಗಳು” ಎಂಬ ಕಾಲಾತೀತ ಸಂದೇಶ ನೀಡಿದ ಆಧ್ಯಾತ್ಮಿಕ ದಿಗ್ಗಜ ಹಾಗೂ ಸಮಾಜ ಸುಧಾರಕ ರಾಮಕೃಷ್ಣ ಪರಮಹಂಸರು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮನ ಸಲ್ಲಿಸಿದ್ದಾರೆ. ರಾಮಕೃಷ್ಣ ಪರಮಹ
Kharge


ನವದೆಹಲಿ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಒಂದೇ ಗುರಿಯನ್ನು ತಲುಪಲು ಹಲವು ಧರ್ಮಗಳು, ಹಲವು ಮಾರ್ಗಗಳು” ಎಂಬ ಕಾಲಾತೀತ ಸಂದೇಶ ನೀಡಿದ ಆಧ್ಯಾತ್ಮಿಕ ದಿಗ್ಗಜ ಹಾಗೂ ಸಮಾಜ ಸುಧಾರಕ ರಾಮಕೃಷ್ಣ ಪರಮಹಂಸರು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮನ ಸಲ್ಲಿಸಿದ್ದಾರೆ.

ರಾಮಕೃಷ್ಣ ಪರಮಹಂಸರು ಜಯಂತಿ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಖರ್ಗೆ ಅವರು, ಧರ್ಮಗಳ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಪ್ರಸಾರದಲ್ಲಿ ರಾಮಕೃಷ್ಣ ಪರಮಹಂಸರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು. ಇಂದಿನ ವಿಭಜಿತ ಮನೋಭಾವಗಳ ಕಾಲದಲ್ಲಿ ಅವರ ಉಪದೇಶಗಳು ಹೆಚ್ಚು ಪ್ರಸ್ತುತವಾಗಿದ್ದು, ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮಹತ್ವವನ್ನು ಸಮಾಜಕ್ಕೆ ನೆನಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.

“ಧರ್ಮವು ಮಾನವನನ್ನು ಒಗ್ಗೂಡಿಸುವ ಸಾಧನವಾಗಬೇಕು, ವಿಭಜಿಸುವ ಆಯುಧವಾಗಬಾರದು ಎಂಬ ಸಂದೇಶವನ್ನು ರಾಮಕೃಷ್ಣ ಪರಮಹಂಸರು ತಮ್ಮ ಜೀವನದ ಮೂಲಕ ಸಾರಿದರು. ಅವರ ಚಿಂತನೆಗಳು ದೇಶದ ಸಾಂಸ್ಕೃತಿಕ ಏಕತೆಯ ಬಲವನ್ನು ಹೆಚ್ಚಿಸಿವೆ” ಎಂದು ಖರ್ಗೆ ತಿಳಿಸಿದ್ದಾರೆ.

ರಾಮಕೃಷ್ಣ ಪರಮಹಂಸರ ಬೋಧನೆಗಳು ವಿಶ್ವಮಾನವೀಯತೆ, ಭಕ್ತಿ ಮತ್ತು ನೈತಿಕತೆಯ ತತ್ವಗಳನ್ನು ಒಳಗೊಂಡಿದ್ದು, ವಿವಿಧ ಧರ್ಮಗಳ ನಡುವಿನ ಸಾಮರಸ್ಯಕ್ಕೆ ಮಾರ್ಗದರ್ಶಕವಾಗಿವೆ. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸಹಾನುಭೂತಿ ಮತ್ತು ಸಮಾನತೆಯನ್ನು ಬಲಪಡಿಸಬೇಕೆಂದು ಖರ್ಗೆ ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande