ಎಐ ಎಕ್ಸ್‌ಪೋ ತೊರೆಯಲು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಸೂಚನೆ
ನವದೆಹಲಿ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗ್ರೇಟರ್ ನೋಯ್ಡಾದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಎಐ ಪ್ರದರ್ಶನದಲ್ಲಿ ಚೀನಾದ ರೋಬೋಟಿಕ್ ನಾಯಿಯನ್ನು ಸ್ವಂತ ಅಭಿವೃದ್ಧಿ ತಂತ್ರಜ್ಞಾನವೆಂದು ಬಿಂಬಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಎಕ್ಸ್‌ಪೋ ತೆರವುಗೊಳಿಸಲು ಆದೇಶಿಸಿದೆ. ಭ
Robo


ನವದೆಹಲಿ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗ್ರೇಟರ್ ನೋಯ್ಡಾದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಎಐ ಪ್ರದರ್ಶನದಲ್ಲಿ ಚೀನಾದ ರೋಬೋಟಿಕ್ ನಾಯಿಯನ್ನು ಸ್ವಂತ ಅಭಿವೃದ್ಧಿ ತಂತ್ರಜ್ಞಾನವೆಂದು ಬಿಂಬಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಎಕ್ಸ್‌ಪೋ ತೆರವುಗೊಳಿಸಲು ಆದೇಶಿಸಿದೆ.

ಭಾರತ ಮಂಟಪದಲ್ಲಿ ನಡೆಯುತ್ತಿರುವ ಭಾರತ ಎಐ ಇಂಪ್ಯಾಕ್ಟ ಶೃಂಗಸಭೆಯ ಅಂಗವಾಗಿ ವಿಶ್ವವಿದ್ಯಾಲಯವು ರೋಬೋಟಿಕ್ ನಾಯಿಯನ್ನು “ಭಾರತದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ” ಎಂದು ಪ್ರದರ್ಶಿಸಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳ ನಂತರ ಬೆಳಕಿಗೆ ಬಂದವು.

ತಂತ್ರಜ್ಞಾನ ವಲಯದ ತಜ್ಞರು, ಪ್ರದರ್ಶನದಲ್ಲಿದ್ದ ರೋಬೋಟಿಕ್ ನಾಯಿ ವಾಸ್ತವದಲ್ಲಿ ಚೀನಾದ ಕಂಪನಿ ಯುನಿಟ್ರಿ ರೊಬೊಟಿಕ್ಸ್ ನಿರ್ಮಿತ ಮಾದರಿಯಾಗಿದೆ ಎಂದು ಗುರುತಿಸಿದ್ದಾರೆ. ಈ ಮಾದರಿ ಮಾರುಕಟ್ಟೆಯಲ್ಲಿ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳಿಗೆ ಲಭ್ಯವಿದ್ದು, 4ಡಿ ಲೈಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಮೆಟ್ಟಿಲು ಏರಲು ಹಾಗೂ ಅಸಮತಟ್ಟಾದ ರಸ್ತೆಗಳ ಮೇಲೆ ಸುಗಮವಾಗಿ ಚಲಿಸಲು ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ.

ವಿವಾದ ಉಲ್ಬಣಗೊಂಡ ಹಿನ್ನೆಲೆ, ಸರ್ಕಾರಿ ಮೂಲಗಳ ಪ್ರಕಾರ ಬುಧವಾರವೇ ಪ್ರದರ್ಶನವನ್ನು ಖಾಲಿ ಮಾಡುವಂತೆ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಲಾಗಿದೆ.

ಈ ಸಂಬಂಧ ಸ್ಪಷ್ಟನೆ ನೀಡಿದ ವಿಶ್ವವಿದ್ಯಾಲಯ, “ರೋಬೋಡಾಗ್ ಅನ್ನು ನಾವು ಇತ್ತೀಚೆಗೆ ಖರೀದಿಸಿದ್ದೇವೆ. ಪ್ರದರ್ಶನ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಿದ್ದೇವೆ. ವಿದ್ಯಾರ್ಥಿಗಳು ಅದರ ಸಾಮರ್ಥ್ಯ ಮತ್ತು ಮಿತಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ನಾವು ಇದನ್ನು ಸ್ವತಃ ನಿರ್ಮಿಸಿದ್ದೇವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ” ಎಂದು ಹೇಳಿಕೆ ನೀಡಿದೆ.

ಅದೇ ವೇಳೆ, “ಭಾರತದಲ್ಲೇ ಇಂತಹ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಿ, ಎಂಜಿನಿಯರ್ ಮಾಡಿ, ತಯಾರಿಸುವ ಪ್ರತಿಭೆಗಳನ್ನು ರೂಪಿಸುವುದು ನಮ್ಮ ಉದ್ದೇಶ” ಎಂದೂ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande