ಕರ್ಪೂರಿ ಠಾಕೂರ್ ಪುಣ್ಯತಿಥಿ ; ನಾಯಕರ ಗೌರವ
ನವದೆಹಲಿ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬಿಹಾರದ ಮಾಜಿ ಮುಖ್ಯಮಂತ್ರಿ, ‘ಭಾರತ ರತ್ನ’ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಕರ್ಪೂರಿ ಠಾಕೂರ್ ಅವರ ಪುಣ್ಯತಿಥಿಯಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದ್ದ
ಕರ್ಪೂರಿ ಠಾಕೂರ್


ನವದೆಹಲಿ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬಿಹಾರದ ಮಾಜಿ ಮುಖ್ಯಮಂತ್ರಿ, ‘ಭಾರತ ರತ್ನ’ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಕರ್ಪೂರಿ ಠಾಕೂರ್ ಅವರ ಪುಣ್ಯತಿಥಿಯಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಅವರು ಕರ್ಪುರಿ ಠಾಕೂರ್ ಅವರನ್ನು ನಿಜವಾದ ಜನನಾಯಕರೆಂದು ಕೊಂಡಾಡಿ, ಸಾಮಾಜಿಕ ನ್ಯಾಯ, ಸೌಲಭ್ಯ ವಂಚಿತರ ಸಬಲೀಕರಣ ಹಾಗೂ ಸಾರ್ವಜನಿಕ ಸೇವೆಗೆ ಅವರ ಜೀವನ ಸಮರ್ಪಿತವಾಗಿತ್ತು ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾತಂತ್ರ್ಯ, ಸಮಾನತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅವರ ಬದ್ಧತೆ ಇಂದಿಗೂ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜೆ.ಪಿ.ನಡ್ಡಾ ಅವರು ಕರ್ಪುರಿ ಠಾಕೂರ್ ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ಪರ ಹೋರಾಟಗಾರರೆಂದು ಸ್ಮರಿಸಿದರು.

ಕೇಂದ್ರ ಸಚಿವ ಗಜರಾಜ್ ಸಿಂಗ್ ಅವರು ಅವರ ತತ್ವಬದ್ಧ ರಾಜಕೀಯವು ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆಯನ್ನು ಬಲಪಡಿಸಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande