ಚುನಾವಣಾ ಆಯೋಗದ ವಾರ್ಷಿಕ ಕ್ರೀಡಾ ಸಪ್ತಾಹಕ್ಕೆ ಚಾಲನೆ
ನವದೆಹಲಿ, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಾರತೀಯ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾದ ‘ವಾರ್ಷಿಕ ಕ್ರೀಡಾ ಸಪ್ತಾಹ 2026’ಕ್ಕೆ ದೆಹಲಿಯ ಕಾಮನ್‌ವೆಲ್ತ್ ಕ್ರೀಡಾಕೂಟ ಕ್ರೀಡಾ ಸಂಕೀರ್ಣದಲ್ಲಿ ಚಾಲನೆ ದೊರಕಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉ
Eci sports


ನವದೆಹಲಿ, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಾರತೀಯ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾದ ‘ವಾರ್ಷಿಕ ಕ್ರೀಡಾ ಸಪ್ತಾಹ 2026’ಕ್ಕೆ ದೆಹಲಿಯ ಕಾಮನ್‌ವೆಲ್ತ್ ಕ್ರೀಡಾಕೂಟ ಕ್ರೀಡಾ ಸಂಕೀರ್ಣದಲ್ಲಿ ಚಾಲನೆ ದೊರಕಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾ ಮನೋಭಾವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ನಡುವೆ ಆಂತರಿಕ ಸಂಬಂಧವಿದೆ ಎಂದು ಹೇಳಿದರು. “ಕ್ರೀಡೆ ಮತ್ತು ಚುನಾವಣೆಗಳು ಒಂದೇ ಅಡಿಪಾಯವನ್ನು ಹಂಚಿಕೊಳ್ಳುತ್ತವೆ. ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನ್ಯಾಯಸಮ್ಮತತೆ ಕ್ರೀಡೆಗಳನ್ನು ವ್ಯಾಖ್ಯಾನಿಸುವ ಮೌಲ್ಯಗಳಾಗಿದ್ದು, ಅವೇ ಭಾರತೀಯ ಚುನಾವಣಾ ಪ್ರಕ್ರಿಯೆಯ ಮೂಲಾಧಾರಗಳು” ಎಂದು ಅಭಿಪ್ರಾಯಪಟ್ಟರು. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸುವಂತೆ ಅವರು ಕರೆ ನೀಡಿದರು.

ಇಸಿಐ ರಿಕ್ರಿಯೇಶನ್ ಕ್ಲಬ್ ಆಯೋಜಿಸಿರುವ ಈ ಕ್ರೀಡಾ ಸಪ್ತಾಹದಲ್ಲಿ ಒಟ್ಟು 383 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಅವರಲ್ಲಿ 72 ಮಹಿಳೆಯರು ಸೇರಿದ್ದಾರೆ. ಚೆಸ್, ಕ್ಯಾರಮ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್ಬಾಲ್ ಮತ್ತು ಟ್ರ್ಯಾಕ್ ಅಥ್ಲೆಟಿಕ್ಸ್ ಸೇರಿದಂತೆ ಏಳು ಪ್ರಮುಖ ಕ್ರೀಡೆಗಳ 43 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿಭಿನ್ನ ವಯೋಮಾನದ ಗುಂಪುಗಳ ಪ್ರಕಾರ 100, 200, 400 ಮತ್ತು 800 ಮೀಟರ್ ಓಟಗಳ ಸ್ಪರ್ಧೆಗಳು ನಡೆಯಲಿವೆ. ವಾರಪೂರ್ತಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande