ಶಾಲಾ ಬ್ಯಾಂಡ್ ಸ್ಪರ್ಧೆ: ಬೆಳಗಾವಿ ವಿಭಾಗದ ಮೂರು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆ
ಧಾರವಾಡ, 07 ನವೆಂಬರ್ (ಹಿ.ಸ.): ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಧಾರವಾಡದಲ್ಲಿ ನಡೆದ 2026ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ವಾದ್ಯ ಸ್ಪರ್ಧೆಯಲ್ಲಿ ಏಳು ಜಿಲ್ಲೆಗಳ 11 ತಂಡಗಳ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೈಪ್ ಬ್ಯಾಂಡ್ ಹಾಗೂ ಬ್ರಾಸ್ ಬ್ಯಾಂಡ್ ವಿಭಾಗಗಳಲ್ಲಿ
ಶಾಲಾ ಬ್ಯಾಂಡ್ ತಂಡ


ಧಾರವಾಡ, 07 ನವೆಂಬರ್ (ಹಿ.ಸ.):

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಧಾರವಾಡದಲ್ಲಿ ನಡೆದ 2026ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ವಾದ್ಯ ಸ್ಪರ್ಧೆಯಲ್ಲಿ ಏಳು ಜಿಲ್ಲೆಗಳ 11 ತಂಡಗಳ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೈಪ್ ಬ್ಯಾಂಡ್ ಹಾಗೂ ಬ್ರಾಸ್ ಬ್ಯಾಂಡ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಾದ್ಯಕೌಶಲ್ಯ ಪ್ರದರ್ಶಿಸಿದರು. ಬಾಲಕಿಯರ ಪೈಪ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ನಂ.1, ಬಾಲಕಿಯರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಬಾಲಕರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿ ಕ್ಯಾಂಪ್‌ನ ಸೇಂಟ್ ಪಾಲ್ಸ್ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದವು.

ಈ ಮೂರು ತಂಡಗಳು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿವೆ. ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವಿದ್ಯಾರ್ಥಿಗಳ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ನಾರಾಯಣ ಭಜಂತ್ರಿ ಬಹುಮಾನ ವಿತರಿಸಿ, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಒಗ್ಗಟ್ಟು, ನಾಯಕತ್ವ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande