ಮೂರು ತಿಂಗಳ ಗಂಡು ಮಗುವಿನ ಪೋಷಕರ ಪತ್ತೆಗಾಗಿ ಪೊಲೀಸರ ಮನವಿ
ಬಳ್ಳಾರಿ, 07 ನವೆಂಬರ್ (ಹಿ.ಸ.): ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದು ಮಕ್ಕಳ ರಕ್ಷಣಾ ಸಂಸ್ಥೆಯ ಸುಪರ್ದಿಯಲ್ಲಿರುವ ಸುಮಾರು ಮೂರು ತಿಂಗಳ ಗಂಡು ಮಗುವಿನ ಜೈವಿಕ ತಂದೆ-ತಾಯಿಯ ಪತ್ತೆಗಾಗಿ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ. ಆಗಸ್ಟ್ 31 ರ
Police appeal to find baby boy's parents


ಬಳ್ಳಾರಿ, 07 ನವೆಂಬರ್ (ಹಿ.ಸ.):

ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದು ಮಕ್ಕಳ ರಕ್ಷಣಾ ಸಂಸ್ಥೆಯ ಸುಪರ್ದಿಯಲ್ಲಿರುವ ಸುಮಾರು ಮೂರು ತಿಂಗಳ ಗಂಡು ಮಗುವಿನ ಜೈವಿಕ ತಂದೆ-ತಾಯಿಯ ಪತ್ತೆಗಾಗಿ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

ಆಗಸ್ಟ್ 31 ರಂದು ಅಲ್ಲೀಪುರ ಗ್ರಾಮದ ವಾರ್ಡ್ ನಂ. 33ರ ನಾಗಪ್ಪನ ಕಟ್ಟೆ ಸಮೀಪದ ಹೊಂಡದಲ್ಲಿ ಅಪರಿಚಿತ ನವಜಾತ ಗಂಡು ಶಿಶುವೊಂದನ್ನು ಯಾರೋ ಎಸೆದು ಹೋಗಿದ್ದರು.

ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಮಗುವಿನ ಯಾವುದೇ ಪೋಷಕರು ಪತ್ತೆಯಾಗಿಲ್ಲ.

ಮಗುವಿನ ಜೈವಿಕ ತಂದೆ ಅಥವಾ ತಾಯಿಯ ಬಗ್ಗೆ ಯಾವುದೇ ಸುಳಿವು ಇದ್ದಲ್ಲಿ ಸಾರ್ವಜನಿಕರು ತಕ್ಷಣವೇ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ: 08392-276461, 9480803049, ಪೆÇಲೀಸ್ ಕಂಟ್ರೋಲ್ ರೂಂ, ಬಳ್ಳಾರಿ: 08392-258100 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಸಬ್-ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

-

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande