ನ. 17 ರಂದು ಎಸ್ಸಿ-ಎಸ್ಟಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕಾರ್ಯಾಗಾರ
ಬಳ್ಳಾರಿ, 04 ನವೆಂಬರ್ (ಹಿ.ಸ.) ಮೈಸೂರು ಆಟೋಮೊಟಿವ್ ಚೇಂಬರ್ ಯುವಶಕ್ತಿ, ಉದ್ಯಮಿದಾರರಿಗಾಗಿ ಬಳ್ಳಾರಿಯಲ್ಲಿ ನವೆಂಬರ್ 17 ರಂದು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಿದೆ. ಮೈಸೂರು ಆಟೋಮೊಟಿವ್ ಚೇಂಬರ್ನ ನಿರ್ದೇಶಕರೂ, ಕರ್ನಾಟಕ ರಾಜ್ಯ ವಾಣಿಜ್ಯ ಕೈಗಾರಿಕೋದ್ಯಮಗಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್
ನ. 17 ರಂದು ಎಸ್ಸಿ-ಎಸ್ಟಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕಾರ್ಯಾಗಾರ


ನ. 17 ರಂದು ಎಸ್ಸಿ-ಎಸ್ಟಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕಾರ್ಯಾಗಾರ


ಬಳ್ಳಾರಿ, 04 ನವೆಂಬರ್ (ಹಿ.ಸ.)

ಮೈಸೂರು ಆಟೋಮೊಟಿವ್ ಚೇಂಬರ್ ಯುವಶಕ್ತಿ, ಉದ್ಯಮಿದಾರರಿಗಾಗಿ ಬಳ್ಳಾರಿಯಲ್ಲಿ ನವೆಂಬರ್ 17 ರಂದು ಒಂದು ದಿನದ

ಕಾರ್ಯಾಗಾರವನ್ನು ಏರ್ಪಡಿಸಿದೆ.

ಮೈಸೂರು ಆಟೋಮೊಟಿವ್ ಚೇಂಬರ್ನ ನಿರ್ದೇಶಕರೂ, ಕರ್ನಾಟಕ ರಾಜ್ಯ ವಾಣಿಜ್ಯ ಕೈಗಾರಿಕೋದ್ಯಮಗಳ ಅಭಿವೃದ್ಧಿ ಸಂಸ್ಥೆಯ

ಅಧ್ಯಕ್ಷರೂ ಆಗಿರುವ ಆರ್. ಮಂಜುನಾಥ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಎಂಎಸ್ಎಂಇ, ರಾಷ್ಟ್ರೀಯ ಎಸ್ಸಿ-ಎಸ್ಟಿ, ಪವರ್ಗ್ರಿಡ್,

ಎನ್ಎಂಡಿಸಿ ಸೇರಿ ವಿವಿಧ ಉದ್ಯಮಗಳ ಸಹಕಾರದಲ್ಲಿ ನವ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್, ಟ್ವಿಟ್ಟರ್, ವಾಟ್ಸಪ್, ಫೇಸ್ಬುಕ್,

ಜಿಮ್ ಪೋರ್ಟಲ್ನ ಬಳಕೆ ಸೇರಿ ವಿವಿಧ ಯೋಜನೆಗಳು, ಶೇ. 4ರ ಮೀಸಲಾತಿ ಸೌಲಭ್ಯಗಳು ಸೇರಿ ವಿವಿಧ

ಸೌಲಭ್ಯಗಳ ಕುರಿತು ಈ ಸಭೆಯಲ್ಲಿ ವಿವರಿಸಲಾಗುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಮಗ್ರವಾಗಿ ಉದ್ಯಮಿಗಳಿಗೆ ವಿವರಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ

ಪಾಲ್ಗೊಳ್ಳಲು ಆಸಕ್ತರು ಉಚಿತವಾಗಿ ಪ್ರವೇಶ ಪಡೆಯಬಹುದು. ಹೆಸರು ನೋಂದಣಿ ಮಾಡಲು 9845057287 ಗೆ ಸಂಪರ್ಕ ಮಾಡಿರಿ.

ಈ ಸಂದರ್ಭದಲ್ಲಿ ಜೋಳದರಾಶಿ ತಿಮ್ಮಪ್ಪ ಇನ್ನಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande